ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕು ಹುಲಗಲಕುಂಟೆ ಗ್ರಾಮದ ರಂಗಸ್ವಾಮಿ ತಂದೆ ಹನುಮಂತ ಭೋವಿ (60) ಕಾಣೆಯಾದ ಕುರಿತು ಅಕ್ಟೋಬರ್ 10 ರಂದು ಹಿರಿಯೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ರಂಗಸ್ವಾಮಿ 5.5 ಅಡಿ ಎತ್ತರ, ದುಂಡುಮುಖ ಹೊಂದಿರುತ್ತಾರೆ. ಮುಖದಲ್ಲಿ ಹಾಗೂ ಮೈಯಲ್ಲಿ ತೊನ್ನು ಹೊಂದಿದ್ದ್ದು, ಸಾಧರಣ ಮೈಕಟ್ಟಿನಿಂದ ಕೂಡಿರುತ್ತಾರೆ. ಮನೆಯಿಂದ ಹೊರಹೊಗುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪಂಚೆ ಧರಿಸಿರುತ್ತಾರೆ.
ಗುರುತು ಪತ್ತೆಯಾದವರು ಹಿರಿಯೂರು ಗ್ರಾಮಾಂತರ ಠಾಣೆ ದೂರವಾಣಿ ಸಂಖ್ಯೆ 9480803115, 8277985509 ಅಥವಾ 080193-263555. ಡಿ.ವೈ.ಎಸ್ಪಿ ಕಛೇರಿ ಸಂಖ್ಯೆ 08193-263499, ಜಿಲ್ಲಾ ನಿಸ್ತಂತು ಕೇಂದ್ರ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

