ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹುಲೇಗೊಂದಿ ಶ್ರೀ ಸಿದ್ದೇಶ್ವರಸ್ವಾಮಿ, ಶ್ರೀ ಪಂಚಲಿಂಗೇಶ್ವಸ್ವಾಮಿ ಮತ್ತು ಶ್ರೀ ದವಳೇಶ್ವರಸ್ವಾಮಮಿಗಳವರ ಕಡೇ ಕಾರ್ತಿಕ ಮಹೋತ್ಸವ ಡಿಸೆಂಬರ್-14ರ ಭಾನುವಾರ ಸಂಜೆ 6 ಗಂಟೆಗೆ ಚಿತ್ರದುರ್ಗ ನಗರದ ಚಂದ್ರವಳ್ಳಿಯಲ್ಲಿ ದೀಪೋತ್ಸವ ಮಹಾಮಂಗಳಾರತಿ ಪ್ರಸಾದ ವಿನಿಯೋಗವಿರುತ್ತದೆ.
ಕಡೇ ಕಾರ್ತಿಕ ಮಹೋತ್ಸವ ಅಂಗವಾಗಿ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಮಹತ್ವದ ಕಾರ್ಯಕ್ರಮಕ್ಕೆ ಶ್ರೀ ಬಸವ ಕುಮಾರಸ್ವಾಮಿ ಮತ್ತು ಡಾ. ಬಸವ ಪ್ರಭು ಸ್ವಾಮೀಜಿ ಅವರು ಆಗಮಿಸಲಿದ್ದಾರೆ.
ನಂದಿಪುರ, ಉಪ್ಪನಾಯಕಹಳ್ಳಿ, ಸೊಂಡೇಕೊಳ, ಗೊಡಬನಾಳ್, ಸಿದ್ದಾಪುರ, ಅನ್ನೇಹಾಳ್, ಕಾಟೇಹಳ್ಳಿ ಸೇರಿದಂತೆ ಜಿಲ್ಲೆಯ ಅನೇಕ ಭಾಗಗಳಿಂದ ಭಕ್ತರು ಭಾಗವಹಿಸಲಿದ್ದು,
ಹುಲೇಗೊಂದಿ ಶ್ರೀ ಸಿದ್ದೇಶ್ವರಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

