ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು, ಸಭಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಮ್ಮ ಗುರುಗಳೊಬ್ಬರು ಹೇಳಿದ್ದಾರೆ. ಮಾನವ ತತ್ವ, ಮಾನವೀಯತೆಯನ್ನು ಕಾಪಾಡಿಕೊಂಡು ನಾವೆಲ್ಲರೂ ಹೋಗಬೇಕಿದೆ. ನಮ್ಮ ಪ್ರಯತ್ನಗಳು ವಿಫಲ ಆಗಬಹುದು; ಆದರೆ ಪ್ರಾರ್ಥನೆ ವಿಫಲ ಆಗಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ ಎಂದು ಶಿವಕುಮಾರ್ ತಿಳಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ನಾವು ಬಿಜಿಎಸ್‌ಎಂದು ಕರೆಯುತ್ತೇವೆ. ‘ಬಿ‘ ಎಂದರೆ ಭಕ್ತಿ, ‘ಜಿ‘ ಎಂದರೆ ಜ್ಞಾನದ, ‘ಎಸ್‘ ಎಂದರೆ ಸಂಗಮ ಎಂದು ನಾನು ಭಾವಿಸಿದ್ದೇನೆ ಎಂದು ಶಿವಕುಮಾರ್ ವಿವರಿಸಿದರು.