ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಾರ್ಚ್ ೨೫ರ ಮಂಗಳವಾರ ನಡು ರಾತ್ರಿ ಸಮೀಪ ಮಾಸಿಕಟ್ಟೆ- ಉಡುಪಿ ಘಾಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿ ಅನೇಕರು ಗಾಯಗೊಂಡರು. ಈ ಬಗ್ಗೆ ಮಾಹಿತಿ ತಿಳಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರು ಕೊಡಚಾದ್ರಿ ಯುವಕರ ಪಡೆಯ ಮೂಲಕ ಖುದ್ದು ಹಾಜರಿದ್ದು, ನಡುರಾತ್ರಿವರೆಗೂ ಗಾಯಾಳುಗಳ ಸಮಸ್ಯೆಗೆ ಸ್ಪಂದಿಸಿದರು. ಈ ಹಿನ್ನೆಲೆಯಲ್ಲಿ ಈ ಬರಹ…
ಮಾನವೀಯತೆಯು ಮಾನವ ಸ್ಥಿತಿಯಿಂದ ಉದ್ಭವಿಸಿದ ಪರಹಿತ ಚಿಂತನೆಯ ಮೂಲಭೂತ ನೀತಿತತ್ವಗಳಿಗೆ ಸಂಬಂಧಿಸಿದ ಪರಹಿತ ಚಿಂತನೆಯನ್ನು ಒಳಗೊಂಡಿರುವ ಸದ್ಗುಣವಾಗಿದೆ. ಹಿಂದು, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಸಿಕ್, ಬೌದ್ಧ ಎಂಬ ಧರ್ಮಕ್ಕಿಂತ ಮಿಗಿಲಾದ ಧರ್ಮ ಜಗತ್ತಿನಲ್ಲಿದೆ. ಅದುವೇ ಮಾನವೀಯ ಧರ್ಮ.
ದೇವರು ಪ್ರತಿಯೊಬ್ಬರಲ್ಲೂ ಮಾನವೀಯತೆಯನ್ನು ಬಿತ್ತಿದ್ದು, ಸಂಕ?ದಲ್ಲಿರುವವರಿಗೆ ಮಾನವೀಯತೆ ಮೂಲಕ ಬೆಳಕು ನೀಡುವ ಕಾರ್ಯ ಮಾಡಬೇಕು. ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಕೂಡ ಮಾನವೀಯತೆ ಆಗಿದ್ದು, ಈ ಮಾನವೀಯತೆಯಲ್ಲಿ ಪ್ರೀತಿ ಇದೆ. ಇಂತಹ ಮಾನವೀಯತೆಯ ಪ್ರೀತಿಯಿಂದ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು.
ಇಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ಮಾನವೀಯತೆಯ ಹರಿಕಾರರಾಗಿರುವ ಮಹಾನ್ ವ್ಯಕ್ತಿಯೇ ಆರ್.ಎಂ. ಮಂಜುನಾಥ ಗೌಡ. ಆತ್ಮೀಯರ ಬಳಗದಲ್ಲಿ ಆರ್‌ಎಂಎಂ ಎಂದೇ ಕರೆಸಿಕೊಳ್ಳುವ ಇವರು ಸಹಕಾರಿ ಕ್ಷೇತ್ರದಲ್ಲಿ ರಾಜ್ಯವಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲೇ ಸಾಧನೆ ಮಾಡಿರುವ ವ್ಯಕ್ತಿ. ನಾಡಿನಲ್ಲಿಯೇ ತೀರ್ಥಹಳ್ಳಿಯನ್ನು ಸಹಕಾರ ಕ್ಷೇತ್ರದ ಹಬ್ ಮಾಡುವಲ್ಲಿ ಆರ್‌ಎಂಎಂ ಪಾತ್ರ ಮಹತ್ವದ್ದು.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಅಧ್ಯಕ್ಷರೂ, ಅಪೆಕ್ಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರೂ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಂಎಡಿಬಿ) ಅಧ್ಯಕ್ಷರೂ ಆಗಿರುವ ಮಂಜುನಾಥ ಗೌಡರ ಸಹಕಾರ ಕ್ಷೇತ್ರದ ಸಾಧನೆ ಒಂದೆಡೆಯಾದರೆ, ಮತ್ತೊಂದೆಡೆ ಇವರ ಅಂತಃಕರಣ, ಮಮತೆ, ಅಕ್ಕರೆ, ಮಾನವೀಯತೆಯ ಸಹೃದಯತೆ ನಿರಂತರವಾಗಿ ಬಿಂಬಿತವಾಗುತ್ತಲೇ ಇರುತ್ತದೆ.
ನೆರೆ, ಬರ ಮತ್ತಿತರೆ ಪ್ರಾಕೃತಿಕ ವಿಕೋಪಗಳು, ಮಹಾಮಾರಿಯಂತೆ ಬಂದೆರಗಿದ ಕೋವಿಡ್, ಬಗರ್‌ಹುಕುಂ ರೈತರ ಸಮಸ್ಯೆಗಳು, ಅಪಘಾತ, ಆಕಸ್ಮಿಕ ಸಾವು ಹೀಗೆ ನಾನಾ ಬಗೆಯ ಸಂಕಷ್ಟದ ಸಂದರ್ಭಗಳಲ್ಲಿ ಸಮಸ್ಯೆಗಳಿಗೆ ಸ್ಪಂದನೆ, ನೊಂದವರಿಗೆ ನೆರವು ನೀಡುವ ಮೂಲಕ ಆರ್‌ಎಂಎಂ ಮಾನವೀಯತೆ ಮೆರೆಯುತ್ತಾ ಬರುತ್ತಿದ್ದಾರೆ.
ಮಾರ್ಚ್ ೨೫ರ ಮಂಗಳವಾರ ನಡು ರಾತ್ರಿ ಸಮೀಪ ಮಾಸಿಕಟ್ಟೆ- ಉಡುಪಿ ಘಾಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿತು. ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅನೇಕರು ಗಾಯಗೊಂಡರು. ಕೆಲವರಿಗೆ ತೀವ್ರ ಸ್ವರೂಪದ ಪೆಟ್ಟಾದರೂ ಕೂಡ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಲಿಲ್ಲ.
ಮಾಸ್ತಿಕಟ್ಟೆ ಆಸ್ಪತ್ರೆಯ ಡಾ. ಪ್ರವೀಣ್ ಡೆಮ್ಲ್ಲೋಲ್ಲೋ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಚಿಕಿತ್ಸೆ ನೀಡಿದರಾದರೂ ಅನೇಕರಿಗೆ ಗಂಭೀರ ಗಾಯಗಳಾಗಿದ್ದವು. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಆರ್.ಎಂ. ಮಂಜುನಾಥ ಗೌಡರು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಗಾಯಾಳುಗಳನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆ (ಸರ್ಕಾರಿ ಆಸ್ಪತ್ರೆ)ಗೆ ಸಾಗಿಸಲು ಮುತುವರ್ಜಿ ವಹಿಸಿದರು.
ಇವರಿಗೆ ಕೊಡಚಾದ್ರಿ ಯುವಕರ ಪಡೆ ಸಹಕಾರ ನೀಡಿತಲ್ಲದೆ, ಈ ಪಡೆಯ ಪ್ರಮುಖರು, ಯುವ ಮುಖಂಡರೂ, ಜೆಸಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರೂ ಆಗಿರುವ ಕುರುವಳ್ಳಿ ನಾಗರಾಜ್ ಅವರು ತಮ್ಮ ಸ್ನೇಹಿತರೊಡಗೂಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ದೊರಕಲು ಸಹಕರಿಸಿದರು. ಅಲ್ಲದೆ ಎಲ್ಲಾ ರೋಗಿಗಳಿಗೆ ಭೋಜನದ ವ್ಯವಸ್ಥೆ ಮಾಡಿದರು. ಮಂಜುನಾಥ ಗೌಡರು ಖುದ್ದು ಸ್ಥಳದಲ್ಲಿದ್ದು ಗಾಯಾಳುಗಳೊಂದಿಗೆ ಊಟ ಮಾಡಿದರು. ನಂತರ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಗಾಯಾಳು ಪ್ರಯಾಣಿಕರ ಊರಿನ ಮಾಹಿತಿ ತಿಳಿದುಕೊಂಡು ಅವರವರ ಊರಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಿದರು.
ನಡುರಾತ್ರಿಯ ಸಮೀಪದಲ್ಲಿ ಉಂಟಾದ ಅಪಘಾತದಿಂದ ಗಾಯಗೊಂಡಿದ್ದ ಪ್ರಯಾಣಿಕರಿಗೆ ಕೊಡಚಾದ್ರಿ ಯುವಕರ ಪಡೆಯ ಮೂಲಕ ಸೂಕ್ತ ಚಿಕಿತ್ಸೆ, ಊಟ ಮತ್ತು ಅವರವರ ಊರಿಗೆ ಹಿಂತಿರುಗಲು ಬಸ್ಸಿನ ವ್ಯವಸ್ಥೆ ಕಲ್ಪಿಸಿದ ಆರ್.ಎಂ. ಮಂಜುನಾಥ ಗೌಡರು ಮತ್ತು ಕೊಡಚಾದ್ರಿ ಯುವಕರ ಪಡೆಯ ಕುರುವಳ್ಳಿ ನಾಗರಾಜ್, ವಾಸುದೇವ ಕಾಮತ್, ಕಾರ್ತಿಕ್ ಗೌಡ, ಅನು? ಶೆಟ್ಟಿ, ಪ್ರಜ್ವಲ್ ಪೂಜಾರಿ, ಆಲ್ವಿನ್ ಡಿಮ್ಯಾಲೋ, ಜೆಸಿ ಆಸ್ಪತ್ರೆಯ ವೈದ್ಯರು, ಅಪಘಾತ ನಡೆದ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಮಾಸ್ತಿಕಟ್ಟೆಯ ವೈದ್ಯರುಗಳಾದ ಡಾ. ಪ್ರದೀಪ್ ಡಿಮ್ಯಾಲೋ, ಡಾ. ಪ್ರವೀಣ್ ಡಿಮ್ಯಾಲೋ, ಚಿಕಿತ್ಸೆ ನೀಡಿದ ಗಾಯಾಳುಗಳು ಕೈಮುಗಿದು ಕೃತಜ್ಞತೆ ಸಲ್ಲಿಸಿದರು.
ಲೇಖನ: ವರಲಕ್ಷ್ಮಿ, ಖಜಾಂಚಿ, ತೀರ್ಥಹಳ್ಳಿ, ತಾಲೂಕು ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ.