ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯೂಯಾರ್ಕ್‌ನಲ್ಲಿ ನಡೆದ ಫಿಡೆ ಮಹಿಳಾ ವಿಶ್ವ ರ‍್ಯಾಪಿಡ್‌ಚೆಸ್ ಚಾಂಪಿಯನ್‍ಶಿಪ್‌ರಲ್ಲಿ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸುವ ಮೂಲಕ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿರುವ ಕೊನೆರು ಹುಂಪಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲ್ಲಿಸಿದ್ದಾರೆ.
ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಚೆಸ್ ಕ್ರೀಡೆಯಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ.
ಕೊನೆರು ಹುಂಪಿ ಅವರ ಈ ಮಹತ್ವದ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಪರಿಶ್ರಮಿಸುತ್ತಿರುವ ಪ್ರತಿಭಾವಂತ ಕ್ರೀಡಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಲಿ, ವಿವಿಧ ಕ್ಷೇತ್ರಗಳ ಮಹಿಳೆಯರಿಗೆ ಸಾಧಿಸುವ ಪ್ರೇರಣೆ ತುಂಬಲಿ ಎಂದು ಅವರು ಆಶಿಸಿದ್ದಾರೆ.