ವಿಧಾನಸಭೆ ಕಲಾಪದಲ್ಲಿ ಹೈಡ್ರಾಮಾ, 18 ಶಾಸಕರು ಅಮಾನತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವರು, ಶಾಸಕರ ಮೇಲೆ ನಡೆದಿರುವ ಹನಿಟ್ರ್ಯಾಪ್ ಹಾಗೂ ಗುತ್ತಿಗೆಯಲ್ಲಿ ಮುಸ್ಲಿಂ ಮೀಸಲಾತಿ ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಹೈಡ್ರಾಮಾಕ್ಕೆ ಕಾರಣವಾದವು.

ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು. ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, ಹನಿಟ್ರ್ಯಾಪ್ ಸರ್ಕಾರ ಎಂದು ಘೋಷಣೆ ಕೂಗಿದರು. ಪ್ರತಿಪಕ್ಷದ ಶಾಸಕರ ವರ್ತನೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ಹನಿಟ್ರ್ಯಾಪ್ ವಿಚಾರ ಮುಂದು ಮಾಡಿ ವಿಧಾನಸಭಾ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ಬಿಜೆಪಿಯ 18 ಸದಸ್ಯರುಗಳನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್‌ಯು.ಟಿ ಖಾದರ್‌ರೂಲಿಂಗ್‌ಹೊರಡಿಸಿದ ಘಟನೆಯೂ ನಡೆದಿದೆ.

ಸ್ಪೀಕರ್ ಸ್ಥಾನದಲ್ಲಿ ಕುಳಿತ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲಾಗಲ್ಲ ಎಂದು ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಸದಸ್ಯರನ್ನು ಸ್ಪೀಕರ್ ಯುಟಿ ಖಾದರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಆಡಳಿತ ರೂಢ ಸರ್ಕಾರದ ಸಚಿವ ಕೆಎನ್ ರಾಜಣ್ಣ ಪ್ರಸ್ತಾಪಿಸಿರುವ ಹನಿ ಟ್ರ್ಯಾಪ್ ಪೀಡೆಗೆ ಕೆಲ ಕೇಂದ್ರ ಸಚಿವರು ಮತ್ತು ನ್ಯಾಯಾಧೀಶರು ಸಹ ಟಾರ್ಗೆಟ್ ಆಗಿರುವುದರಿಂದ ಇದೊಂದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಸಿಬಿಐನಿಂದಲೇ ತನಿಖೆ ಮಾಡಿಸಬೇಕೆಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಒತ್ತಾಯಿಸಿದರು.

 ಸರ್ಕಾರದಿಂದ ಯಾವುದೇ ಉನ್ನತಪಟ್ಟದ ತನಿಖೆ ನಡೆದರೂ ಸತ್ಯ ಹೊರಬರಲಾರದು, ಯಾಕೆಂದರೆ ಸಚಿವ ಪರೋಕ್ಷವಾಗಿ ತಮ್ಮ ಪಕ್ಷದ ನಾಯಕನ ವಿರುದ್ಧ ಆಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆವಹಿಸಿ ಸಂಧಾನ ಮಾಡಿಸುವ ಸಾಧ್ಯತೆ ಇದೆ. ಹಾಗಾಗಿ, ಸಿಬಿಐ ನಿಂದ ತನಿಖೆ ನಡೆಯಬೇಕು ಎಂದು ವಿಶ್ವನಾಥ್ ಒತ್ತಾಯಿಸಿದರು.

ಅಮಾನತು ಆದ ಶಾಸಕರ ಮಾಹಿತಿ ಇಲ್ಲಿದೆ.
ದೊಡ್ಡಣ್ಣ ಗೌಡ ಪಾಟೀಲ್
ಸಿ ಕೆ ರಾಮಮೂರ್ತಿ
ಅಶ್ವತ್ಥ ನಾರಾಯಣ
ಎಸ್ ಆರ್ ವಿಶ್ವನಾಥ್
ಬೈರತಿ ಬಸವರಾಜ
ಎಂ ಆರ್ ಪಾಟೀಲ್
ಚನ್ನಬಸಪ್ಪ
ಬಿ ಸುರೇಶ್ ಗೌಡ
ಉಮನಾಥ್ ಕೋಟ್ಯಾನ್
ಶರಣು ಸಲಗಾರ್
ಶೈಲೇಂದ್ರ ಬೆಲ್ದಾಳೆ
ಯಶಪಾಲ್ ಸುವರ್ಣ
ಹರೀಶ್ ಬಿಪಿ
ಡಾ. ಭರತ್ ಶೆಟ್ಟಿ
ಮುನಿರತ್ನ
ಬಸವರಾಜ ಮತ್ತಿಮೋಡ್
ಧೀರಜ್ ಮುನಿರಾಜು
ಡಾ ಚಂದ್ರು ಲಮಾಣಿ

 

 

 

- Advertisement -  - Advertisement - 
Share This Article
error: Content is protected !!
";