ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
”ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್” ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಎಬಿವಿಪಿ ರಥಯಾತ್ರೆಯಲ್ಲಿ ಭಾಗಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, ಎಬಿವಿಪಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ. ನಾನು ದಾರಿಯಲ್ಲಿ ಬರುತ್ತಿದ್ದೆ. ಅಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಹೊರಟಿತ್ತು. ಅಬ್ಬಕ್ಕನಿಗೆ ಹೂ ಹಾಕಿದ್ದೇವಷ್ಟೇ. ಈ ವೇಳೆ ಶಾಸಕ ಷಡಕ್ಷರಿ ನಾನೂ ಒಟ್ಟಿಗೆ ಇದ್ದೆವು. ನಾನು ಯಾವ ಎಬಿವಿಪಿ ಕಾರ್ಯಕ್ರಮವನ್ನೂ ಅಟೆಂಡ್ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.
ವಿರೋಧಿಗಳು:
ವಿವಾದ ಮಾಡುವುದಾದರೆ ಮಾಡಿಕೊಳ್ಳಲಿ. ನನಗೇನೂ ತೊಂದರೆ ಇಲ್ಲ. ನಾನು ನನ್ನ ಐಡಿಯಾಲಜಿಗೆ ಬದ್ಧತೆ ಇರುವವನು. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಐ ಯಾಮ್ ಎ ಟ್ರೂ ಕಾಂಗ್ರೆಸ್ ಮ್ಯಾನ್. ಐ ಆಮ್ ಎ ಡೈ ಹಾರ್ಡ್ ಕಾಂಗ್ರೆಸ್ ಮ್ಯಾನ್. ನಮಗೂ ರಾಜಕೀಯ ವಿರೋಧಿಗಳು ಇರುತ್ತಾರೆ. ಅವರು ಏನು ಬೇಕಾದರೂ ಮಾಡುತ್ತಿರಬಹುದು. ಪಕ್ಷದ ಒಳಗೆ, ಹೊರಗೂ ಇರಬಹುದು. ಇಂತಹ ಚೀಪ್ ಟ್ರಿಕ್ಸ್ ಜನರಿಗೆ ಗೊತ್ತಾಗುತ್ತದೆ. ಪರಮೇಶ್ವರ್ ಏನು ಅಂತ ಇಡೀ ರಾಜ್ಯಕ್ಕೆ ಗೊತ್ತು. ಕಳೆದ 35 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯ ಏನು ಅಂತ ನನಗೂ ಗೊತ್ತಿದೆ. ನಾನು ಅದನ್ನು ಪದೇ ಪದೆ ಸಾಬೀತು ಮಾಡಬೇಕಿಲ್ಲ ಎಂದು ತಿಳಿಸಿದರು.
ಸಿಎಂ ತೀರ್ಮಾನ: ಬೆಂಗಳೂರಲ್ಲಿ ಒಳ ಮೀಸಲಾತಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಎಲ್ಲಾ ಲೆಕ್ಕಾಚಾರ ಹಾಕಿಯೇ ಮಾಡಲಾಗಿದೆ. ಜಾತಿ ಸಂಖ್ಯೆ ಆಧಾರದ ಮೇಲೆ ವರ್ಗೀಕರಣವಾಗಿದೆ. ಅದರ ಆಧಾರದ ಮೇಲೆ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. ಇದಕ್ಕೆ ಕೆಲವರು ಒಪ್ಪಿಲ್ಲ ಅಂತ ಇದೆ. ಅದಕ್ಕಾಗಿ ಅವರು ಪ್ರತಿಭಟನೆ ಮಾಡಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೆ ಹೋಗಿದೆ. ಅವರನ್ನು ಸಿಎಂ ಭೇಟಿ ಆಗಬಹುದು. ಸಿಎಂ ಯಾವ ತೀರ್ಮಾನ ಮಾಡ್ತಾರೆ ನೊಡೋಣ. ಯಾರೋ ಒಬ್ಬರೇ ತೀರ್ಮಾನಿಸಲಾಗಲ್ಲ” ಎಂದು ಪ್ರತಿಕ್ರಿಯಿಸಿದರು.
ಮದ್ದೂರು ಶಾಂತ: ಮದ್ದೂರು ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾತನಾಡಿ, ಮದ್ದೂರು ಈಗ ಶಾಂತವಾಗಿದೆ. ಬಂಧಿಸಿದವರ ಮೇಲೆ ಕ್ರಮ ಆಗಿದೆ. ಎಲ್ಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಯಾರು ಪ್ರಚೋದನೆ ಮಾಡಿದ್ದಾರೆ. ಅವರ ಮೇಲೂ ಕ್ರಮಜರುಗಲಿದೆ. ಸದ್ಯಕ್ಕೆ ಮದ್ದೂರು ಶಾಂತವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ FIR ದಾಖಲಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ದ್ವೇಷ ಭಾಷಣ ಮಾಡಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಪೊಲೀಸರುಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

