ಪ್ರೀತಿ, ವಿಶ್ವಾಸ, ಸತ್ಕಾರಗಳಿಗೆ ನಾನೆಂದಿಗೂ ಚಿರಋಣಿ-ಸಿಟಿ ರವಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಿಂದ ನನ್ನೂರು ಚಿಕ್ಕಮಗಳೂರಿಗೆ ಬರುವ ಹಾದಿಯಲ್ಲಿ ಕುಣಿಗಲ್ , ಚೆನ್ನರಾಯಪಟ್ಟಣ , ಹಾಸನ ಹಾಗು ಬೇಲೂರಿನ ಬಿಜೆಪಿ ಹಾಗು NDA ಅಂಗಪಕ್ಷವಾದ ಜೆಡಿಎಸ್  ಪಕ್ಷದ ಕಾರ್ಯಕರ್ತ ಬಂಧುಗಳು, ಸತ್ಯಕ್ಕೆ ದೊರಕಿದ ಜಯವನ್ನು ಸಂಭ್ರಮಿಸಿ, ಪ್ರೀತಿ ಆದರಗಳಿಂದ ಬರಮಾಡಿಕೊಂಡ ಪರಿ ಜೀವನದಲ್ಲಿ ಮರೆಯಲಾಗದ ಸನ್ನಿವೇಶ ಎಂದು ಸಿಟಿ ರವಿ ಭಾವುಕರಾಗಿ ಹೇಳಿದರು.

ಕಾರ್ಯಕರ್ತರ ಪ್ರೀತಿ ವಿಶ್ವಾಸ ಗೌರವಕ್ಕೆ ಮನದುಂಬಿ ಬಂತು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸತ್ಕಾರಗಳಿಗೆ ನಾನೆಂದಿಗೂ ಚಿರಋಣಿ. ನನ್ನ ಸಂಕಷ್ಟದ ಸ್ಥಿತಿಯಲ್ಲಿ ನನಗೆ ಬೆಂಬಲವಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಡಲು ಆತ್ಮವಿಶ್ವಾಸ ನೀಡಿದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳನ್ನು ಸಿಟಿ ರವಿ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";