ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಪ್ರಸಾರ ಭಾರತಿ ಆಕಾಶವಾಣಿ ಚಿತ್ರದುರ್ಗ ಪ್ರಸಾರ ಕೇಂದ್ರದ 34ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಕಾಶವಾಣಿಯ ವಿಶೇಷ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಸುಧಾಕರ್ ಮಾತನಾಡುತ್ತಾ ಸರ್ವೇ ಜನ ಸುಖಿನೋ ಭವಂತು ಎಂಬ ಧ್ಯೇಯ ವಾಕ್ಯದೊಂದಿಗೆ 34 ವರ್ಷಗಳಿಂದ ನಿರಂತರವಾಗಿ ಮಾಹಿತಿ ಶಿಕ್ಷಣ ಮನೋರಂಜನೆಯನ್ನು ಅತ್ಯಂತ ಗುಣಾತ್ಮಕವಾಗಿ ನೀಡುತ್ತಿರುವುದು ನಮಗೆಲ್ಲ ತಿಳಿದ ವಿಷಯ. ಕರ್ನಾಟಕ ಸರ್ಕಾರದ ಹತ್ತು ಹಲವಾರು ಯೋಜನೆಗಳನ್ನ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವಲ್ಲಿಯಲ್ಲಿ, ಸಾಹಿತ್ಯ, ಸಂಸ್ಕೃತಿ, ಕಲೆ ಜಾನಪದ ಹೀಗೆ ಬಹು ಆಯಾಮಗಳಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಆಕಾಶ ವಾಣಿಯ ಪಾತ್ರ ಹಿರಿದು ಎಂದರು.
ನಾನು ಆಕಾಶವಾಣಿಯ ಅಭಿಮಾನಿ. ಅಲ್ಲದೆ ನನ್ನ ಬಿಡುವಿನ ವೇಳೆಯಲ್ಲಿ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳನ್ನು ಕೇಳುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಲಯದ ಮುಖ್ಯಸ್ಥರಾದ ಎಸ್.ಆರ್ .ಭಟ್, ತಾಂತ್ರಿಕ ಮುಖ್ಯಸ್ಥರಾದ ಕೆ.ಕೆ.ಮಣಿ, ಪ್ರಸಾರ ವಿಭಾಗದ ಮುಖ್ಯಸ್ಥರಾದ ಶಿವಪ್ರಕಾಶ್ ಡಿ.ಆರ್., ತಾಂತ್ರಿಕ ವಿಭಾಗದ ಮಿಲಿಂದ್ ಗುತ್ತಿ, ಸೈಯದ್ ನಜಿ ಉಲ್ಲಾ, ಸಂದರ್ಶಕರಾದ ಡಾ.ನವೀನ್ ಮಸ್ಕಲ್, ಯುವ ವಾಣಿ ಕಾರ್ಯಕ್ರಮದ ನಿರಂಜನ್ ಉಪಸ್ಥಿತರಿದ್ದರು.