ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮರೆತು ನನ್ನ ತೊರೆದು ಹೋದೆ
ಒಲವಿನ ಓಲೆಯ ಬರೆದೆ ನಿನಗೆ
ವಿಷದ ಹಾಲನು ಉಣಿಸಿದೆ ನನಗೆ
ಪ್ರೀತಿಯ ಹಾಡನು ಹಾಡಲಿ ಹೇಗೆ
ಮುಳ್ಳಿನ ಹಾಸಿದು ಬದುಕಿನ ಬೇಗೆ llಪll
ಕಂಡ ಕನಸು ಬರಿದಾದ ಮೇಲೆ
ಕೊಟ್ಟ ಭರವಸೆ ಹುಸಿಯಾದ ಮೇಲೆ
ಮತ್ತೆ ಚಿಗುರುವ ಕನಸ್ಸಿನ್ನೆಲ್ಲಿ
ಬಾಡಿಹೋಗಿದೆ ಮನ ಸೊರಗಿ ಹೋಗಿದೆ llಪll
ಮರೆತು ನನ್ನ ತೊರೆದು ಹೋದೆ
ಅರಿಯುವ ಮುನ್ನ ಮುರಿದುಹೋದೆ
ಮತ್ತೆ ಕಟ್ಟುವ ಮಾತಿನ್ನೆಲ್ಲಿ
ಸುಟ್ಟುಹೋಗಿದೆ ಮನ ಕದಡಿ ಹೋಗಿದೆ llಪll
ಒಡೆದು ಕನ್ನಡಿ ಚೂರು ಮಾಡಿ
ಸುರಿದೆ ಮೇಲೆ ನಗೆಯ ಬೀರಿ
ನೆಮ್ಮದಿ ಬಾಳು ಹುಡುಕಲಿ ಎಲ್ಲಿ
ಮಾಯವಾಗಿದೆ ಸುಖ ಶಾಂತಿಯು ದೂರವಾಗಿದೆ llಪll
ಕವಿತೆ:ವೆಂಕಟೇಶ.ಹೆಚ್, ಚಿತ್ರದುರ್ಗ (ನವ ದೆಹಲಿ).7760023887

