ಹೈಕಮಾಂಡ್ ಗೆ ಎಲ್ಲ ವಿಷಯ ಮುಟ್ಟಿಸಿದ್ದೇನೆ-ರಾಮುಲು

News Desk

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದೂರವಾಣಿ ಕರೆ ಮಾಡಿ ಮಾತನಾಡಿದ್ದು ಅವರಿಗೆ ಎಲ್ಲ ವಿಷಯ ತಿಳಿಸಿದ್ದೇನೆ. ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅವರು ಸಭೆಯಲ್ಲಿ ನಡೆದುಕೊಂಡ ಬಗ್ಗೆಯೂ ಹೇಳಿದ್ದೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಬಳ್ಳಾರಿಯ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಡ್ಡಾ ಅವರು ನಿನ್ನ ಪರವಾಗಿ ನಾನಿದ್ದೀನಿ, ಯಾವುದೇ ಯೋಚನೆ ಮಾಡಬೇಡಿ. ದೆಹಲಿಗೆ ಬನ್ನಿ ಎಂದು ಹೇಳಿದ್ದು ನಾನು ಬರ್ತೀನಿ ಎಂದು ತಿಳಿಸಿದ್ದೀನಿ ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ, ದೆಹಲಿಗೆ ಯಾವಾಗಲಾದರೂ ಬನ್ನಿ. ಮೋದಿ, ಅಮಿತ್ ಶಾ ಅವರಿಗೆ ಸುದ್ದಿ ಮುಟ್ಟಿಸಿದ್ದೇವೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ಅವರು ತಿಳಿಸಿದ್ದಾರೆ ಎಂದರು.

ಕೇಂದ್ರ ಸಚಿವ ಜೋಶಿಯವರು ಕಾಲ್ ಮಾಡಿ, ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ದರು. ಅಷ್ಟೊತ್ತಿಗೆ ನಡ್ಡಾ ಅವರೇ ಕರೆ ಮಾಡಿ ಮಾತನಾಡಿದ್ರು ಎಂದು ತಿಳಿಸಿದರು.

ನಿಮಗೆ ನೋವಾಗಿದೆ ಅನ್ನೊದು ಗೊತ್ತಾಗಿದೆ. ಅಗರ್​ವಾಲ್​ ಸಹಿತ ತಮ್ಮ ಮಾತು ಹಿಂದಕ್ಕೆ ತಗೊಳ್ಳೊದಾಗಿ ಹೇಳಿದ್ದಾರೆ. ನೀವು ಪಾರ್ಟಿ ಬಿಡುವ ಬಗ್ಗೆ ಯೋಚನೆ ಮಾಡಬೇಡಿ ಎಂದು ಜೋಶಿ ಹೇಳಿದ್ದಾರೆ ಎಂದು ತಿಳಿಸಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕರೆ ಮಾಡಿ ಮಾತಾಡಿ ನಿಮಗೆ ಈ ರೀತಿ ಆಗಿರೋದು ನೋವಾಗಿದೆ ಎಂದರು.

ಆರ್. ಅಶೋಕ್, ಬೊಮ್ಮಾಯಿ, ಸದಾನಂದ ಗೌಡ್ರು ಮಾತನಾಡಿದ್ದಾರೆ. ಎಲ್ಲರಿಗೂ ನನ್ನ ಮೇಲೆ ವಿಶ್ವಾಸ ಇದೆ. ನನ್ನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಸಾಧ್ಯ ಆದಷ್ಟು ಅಳಿಲು ಸೇವೆ ಸಲ್ಲಿಸಿದ್ದೀನಿ. ಹೀಗಾಗಿ ಅದನ್ನ ಗುರುತಿಸಿ ಮಾತನಾಡಿದ್ದಾರೆ ಎಂದು ರಾಮುಲು ತಿಳಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";