ರಾಹುಲ್​ ಗಾಂಧಿ ಭೇಟಿಗೆ ಸಮಯ ಕೇಳಿಲ್ಲ-ಡಿಸಿಎಂ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ರಾಹುಲ್​ ಗಾಂಧಿ ಮನವೊಲಿಕೆಗೆ ಪ್ಲಾನ್ ಮಾಡಿದ್ದಾರೆ. ಆ ಮೂಲಕ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ದೆಹಲಿ ಅಂಗಳ ತಲುಪಿದೆ.

ಅಸ್ಸಾಂ ಚುನಾವಣಾ ಪೂರ್ವ ಸಿದ್ಧತೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಭೇಟಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

- Advertisement - 

ಈ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಭೇಟಿಗೆ ಇನ್ನೂ ಸಮಯ ಕೇಳಿಲ್ಲ. ಅಸ್ಸಾಂ ರಾಜ್ಯದ ಚುನಾವಣೆ ವಿಚಾರದ ಜಂಜಾಟದಲ್ಲಿದ್ದೇನೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸುಮ್ಮನೇ ವಿಭಿನ್ನ ರೀತಿಯಲ್ಲಿ ಮಾತ‌ನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 

- Advertisement - 

Share This Article
error: Content is protected !!
";