ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ :
“ಡಾ. ಕೆ ಸುಧಾಕರ್ ಅಲ್ಲ.. ಅವರ ಅಪ್ಪನ ಕೈಯಿಂದಲೂ ನನ್ನ ಕೂದಲು ಮುಟ್ಟಲು ಸಾಧ್ಯವಿಲ್ಲ. ಕೋವಿಡ್ ಪ್ರಕರಣದಲ್ಲಿ ನಿನ್ನ ಒಳಗೆ ಕಳಿಸದೇ ಬಿಡಲ್ಲ, ಅದ್ಹೇಗೆ ಕಾಪಾಡಿಕೊಳ್ತಿಯೋ ಕಾಪಾಡ್ಕೋ ನೋಡೋಣ” ಎಂದು ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲೇ ಸಂಸದ ಡಾ. ಕೆ. ಸುಧಾಕರ್ ಅವರಿಗೆ ಸವಾಲು ಹಾಕಿದರು.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಂತರ ಸುದ್ದಿಗಾರರ ಜತೆ ಮಾತನಾಡುವ ವೇಳೆ, ಇನ್ನು 3 ವರ್ಷಗಳ ನಂತರ ನೀವು ಎಲ್ಲೂ ಗೆಲ್ಲಲು ಸಾಧ್ಯವಿಲ್ಲ ಎಂದು ಸಂಸದರು ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ದೇಶ ಅಥವಾ ರಾಜ್ಯ ಅಲ್ಲ, ಡಾ. ಸುಧಾಕರ್ ಅವರ ಅಪ್ಪನ ಕೈಯಿಂದಲೂ ನನ್ನ ಕೂದಲು ಮುಟ್ಟಲು ಸಾಧ್ಯವಿಲ್ಲ. ನಾವು ಮತ್ತೆ ಫಿನಿಕ್ಸ್‌ನಂತೆ ಎದ್ದುಬರುತ್ತೇವೆ ಎಂದು ಗುಡುಗಿದರು.
ಕೋವಿಡ್ ಸಮಯದಲ್ಲಾದ ಹಗರಣ, ಚಿಕ್ಕಬಳ್ಳಾಪುರ ಸಂಸದರ ಕುತ್ತಿಗೆಗೆ ಒಂದಲ್ಲ ಒಂದಿನ ಬಂದೇ ಬರುತ್ತೆ – ಶಾಸಕ ಪ್ರದೀಪ್ ಈಶ್ವರ್ ಸುಧಾಕರ್‌ರನ್ನು ಜೈಲಿಗೆ ಕಳುಹಿಸುತ್ತೇನೆ.
”ಕೋವಿಡ್ ಕಳ್ಳ ಡಾ. ಸುಧಾಕರ್‌ನನ್ನು ಖಂಡಿತವಾಗಿ ಜೈಲಿಗೆ ಕಳಿಸುತ್ತೇನೆ. ಹೆಣಗಳ ಮೇಲೆ ಸಂಪಾದನೆ ಮಾಡಿದ ದುಡ್ಡಿನಿಂದ ರಾಜಕೀಯ ಮಾಡಿದ್ದಾರೆ. ನಾಳೆಯಿಂದ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಶುರುವಾಗುತ್ತೆ. 6 ಜನ ಸದಸ್ಯರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ. ಕಾಂಗ್ರೆಸ್ ಮುಖಂಡರೊಬ್ಬರು ಪುರಸಭೆ ಆಸ್ತಿಯನ್ನು ಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ನಾಳೆಯಿಂದಲೇ ಶುರುವಾಗುತ್ತೆ ನೋಡಿ” ಎಂದು ಹೇಳಿದರು.
ಹೈಕೋರ್ಟ್‌ನಲ್ಲಿ ಏನು ಆದೇಶ ಬರುತ್ತೋ ನೋಡೋಣ? ನಮ್ಮ ವಿರುದ್ಧವಾಗಿ ಮತ ಚಲಾಯಿಸಿದ ಆ ಅಯೋಗ್ಯರು, ಭ್ರಷ್ಟರು ಹೋಗಿದ್ದಾರೆ. ಮತ್ತೆ ಚುನಾವಣೆ ನಡೆಯುತ್ತೆ, ನಂಬರ್ ಗೇಮ್‌ನಲ್ಲಿ ಸದಸ್ಯರನ್ನು ಭ್ರಷ್ಟರು, ಅಯೋಗ್ಯರು ಕಿಡ್ನಾಪ್ ಮಾಡಿದ್ದರು. ಒಬ್ಬರು ಬ್ರೋಕರ್ ಸದಸ್ಯರನ್ನು ಕರೆದುಕೊಂಡು ಬಸ್‌ನಲ್ಲಿ ಬಂದಿದ್ದಾರೆ. ಆದರೆ ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಡಾ. ಸುಧಾಕರ್‌ಗೆ ಟಾಂಗ್ ನೀಡಿದರು.
Undefined ಅಕ್ಕಪಕ್ಕದಲ್ಲೇ ಪ್ರದೀಪ್ ಈಶ್ವರ್, ಡಾ. ಸುಧಾಕರ್ : ಮುಖವೂ ನೋಡಲಿಲ್ಲ, ಕೈಯೂ ಕುಲುಕಲಿಲ್ಲಾ, ಮಾತಿಲ್ಲ, ಕಥೆಯಿಲ್ಲ..
ಶವಗಳ ಮೇಲೆ ದುಡ್ಡು ಸಂಪಾದನೆ-
”ಡಾ. ಸುಧಾಕರ್ ಒಬ್ಬ ಕೋವಿಡ್ ಕಳ್ಳ, ಶವಗಳ ಮೇಲೆ ದುಡ್ಡು ಸಂಪಾದನೆ ಮಾಡಿದ್ದಾನೆ. ನಗರಸಭೆ ಚುನಾವಣೆಗೋಸ್ಕರ 7-8 ಕೋಟಿ ರೂ. ಖರ್ಚು ಮಾಡಿದ್ದಾನೆ. ಅಷ್ಟು ಖರ್ಚು ಮಾಡಲು ನಮ್ಮಿಂದ ಸಾಧ್ಯವಿಲ್ಲ. ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರು ನನಗೆ ಅಷ್ಟೊಂದು ಪರಿಚಯ ಇಲ್ಲ. ಆದರೆ ನಾನು ಪಾಠ ಕಲಿತಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ- ಉಪಾಧ್ಯಕ್ಷರನ್ನು ಗೆಲ್ಲಿಸಿ ಕಾಲರ್ ಎಗರಿಸುವಂತೆ ಮಾಡುತ್ತೇನೆ” ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.