ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರೆಯುತ್ತೇನೆ
———————
ಏಕೆಂದರೆ ?
ನನ್ನ ನೋವ ಕಂತೆಗಳು
ಮನದ ಕೋಣೆಯಲಿ
ಜೇಡ ಹೆಣೆದ ಬಲೆಯಾಗಿ
ಬಹುದಿನದ ಸರಕಿಗೆ
ಗೆದ್ದಲು ಹುಳು ಧಾವಿಸಿದಂತೆ
ಧೂಳ ರಾಶಿಯಲಿ
ಕೊಳೆತು ಹೋಗದಂತೆ ತಡೆಯಲು
ಏಕೆಂದರೆ ?
ನನ್ನ ಕಥೆಯಾದರು ಇಷ್ಟಾದರೆ
ನನ್ನವರ ಬದುಕಿಗೆ ದಿಕ್ಕಾಗಲು
ಆ ನೋವುಗಳಿಂದ ಮೇಲೇಳಲು
ಕತ್ತಲಲ್ಲಿ ಹುಟ್ಟುವ
ಮೊಳಕೆಗಳ ಮೇಲೆ ಬೆಳಕು ಹಾಯಲು
ಏಕೆಂದರೆ ?
ಈ ನೆಲದ ಅನ್ಯಾಯ ಬಂಧಿಸಲು
ಕನಸು ಹೆಣೆದ ನನ್ನವರ ಮೊಗದಲ್ಲಿ
ಆಸೆಗಳ ಹುಟ್ಟು ಹಾಕಲು
ಈ ಶತಮಾನದ
ಶುದ್ಧ ಸಸಿಯಾಗಿ
ಗಿಡವಾಗಿ
ಮರವಾಗಿ ಬೆಳೆಸಲು
ಕವಿತೆ-ಕುಮಾರ್ ಬಡಪ್ಪ