ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಐಎಎಸ್-ಐಪಿಎಸ್ ಗಳ ನೇಮಕ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಬಿಎಂಪಿಗೆ ಮಂಜೂರಾಗಿರುವ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಹೊಸದಾಗಿ ರಚನೆಯಾದ 5 ನಗರ ಪಾಲಿಕೆಗಳಿಗೆ ಮರುಹಂಚಿಕೆ ಮಾಡಿ, ಪದನಾಮಗಳನ್ನು ಮರುವಿನ್ಯಾಸಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಬೃಹತ್ ಯೋಜನೆಗಳು ಹಾಗೂ ರಚನೆಯಾಗಲಿರುವ ಐದು ನಗರ ಪಾಲಿಕೆಗಳಿಗೆ ಹಣಕಾಸು ಹಂಚಿಕೆ ಮಾಡುವ ಅಧಿಕಾರವುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಒಟ್ಟು 75 ಮಂದಿ ಸದಸ್ಯರ ನೇಮಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಬಿಬಿಎಂಪಿಗೆ ಮಂಜೂರಾಗಿರುವ 15 ಐಎಎಸ್ ಹಾಗೂ 2 ಐಪಿಎಸ್ ವೃಂದದ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳಿಗೆ (ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳು) ಮರು ಹಂಚಿಕೆ ಮಾಡಿ ಪದನಾಮಗಳನ್ನು ಮರುವಿನ್ಯಾಸಗೊಳಿಸಿ ಆದೇಶಿಸಿದೆ.

- Advertisement - 

ವಿಶೇಷ ಆಯುಕ್ತರ ನೇಮಕ:
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಸ್ಥಾನದ ಐಎಎಸ್ ಅಧಿಕಾರಿ ಮುಖ್ಯ ಆಯುಕ್ತರಾಗಿರಲಿದ್ದಾರೆ. ಐಎಎಸ್ ಶ್ರೇಣಿಯ ನಾಲ್ವರು ವಿಶೇಷ ಆಯುಕ್ತರನ್ನು ಪ್ರಾಧಿಕಾರಕ್ಕೆ ನೇಮಿಸಲಾಗಿದೆ. ಆಡಳಿತ
, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಆರೋಗ್ಯ ಮತ್ತು ಶಿಕ್ಷಣ ವಿಭಾಗ, ಎಫ್‌ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಭಾಗ ಮತ್ತು (ಹಣಕಾಸು) ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ನಾಲ್ಕು ವಿಶೇಷ ಆಯುಕ್ತರನ್ನು ಮರುಹಂಚಿಕೆ ಮಾಡಿ ಆದೇಶಿಸಲಾಗಿದೆ.

ಎಡಿಜಿಪಿ ಹಾಗೂ ಎಸ್​ಪಿ ಹುದ್ದೆ ಹಂಚಿಕೆ:
ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಐವರು ಆಯುಕ್ತರನ್ನು ಮರುಹಂಚಿಕೆ ಮಾಡಲಾಗಿದೆ. ಜೊತೆಗೆ ಐದು ನಗರ ಪಾಲಿಕೆಗಳಿಗೆ ತಲಾ ಒಬ್ಬರಂತೆ ಅಪರ ಆಯುಕ್ತ (ಅಭಿವೃದ್ಧಿ) ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಿಎಂಟಿಎಫ್ ವಿಭಾಗಕ್ಕೆ ಎಡಿಜಿಪಿ ಹಾಗೂ ಎಸ್​ಪಿ ಹುದ್ದೆಯನ್ನು ಹಂಚಲಾಗಿದೆ.

- Advertisement - 

Share This Article
error: Content is protected !!
";