ಐಸಿಎಸ್​ಇ 10ನೇ ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಬುಧವಾರ ಪ್ರಕಟಿಸಿದೆ.
ಈ ಭಾರಿ ಕೂಡ
SSLC, PUC ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಐಸಿಎಸ್‌ಇಯ ಅಧಿಕೃತ ವೆಬ್‌ಸೈಟ್ cisce.orgನಲ್ಲಿ ಫಲಿತಾಂಶ ಲಭ್ಯವಿದ್ದು, results.cisce.org ಈ ವೆಬ್‌ಸೈಟ್‌ನಲ್ಲೂ ಫಲಿತಾಂಶ ನೋಡಲು ಅವಕಾಶ ನೀಡಲಾಗಿದೆ.

ಭಾರತದಾದ್ಯಂತ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದರು. ಇದೀಗ ಫಲಿತಾಂಶ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​ ನೀಡಲಾಗಿದೆ.
10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ. 99.09 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದು, 12ನೇ ತರಗತಿ ಪರೀಕ್ಷೆಯಲ್ಲಿ ಶೇ 99.02 ರಷ್ಟು ಮಕ್ಕಳು ಉತ್ತೀರ್ಣ ಆಗಿದ್ದಾರೆ.
ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಟಾಪರ್‌ಗಳ ಹೆಸರನ್ನು ಪ್ರಕಟಿಸಲಿದೆ.
12ನೇ ತರಗತಿಯ ಐಎಸ್‌ಸಿ ಪರೀಕ್ಷೆಗಳು ಫೆಬ್ರವರಿ 13 ರಿಂದ ಏಪ್ರಿಲ್ 5 ರವರೆಗೆ ನಡೆದರೆ, 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಗಳು ಫೆಬ್ರವರಿ 18 ರಿಂದ ಮಾರ್ಚ್ 27 ರವರೆಗೆ ನಡೆದಿದ್ದವು. ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಫಲಿತಾಂಶ ಹೀಗೆ ನೋಡಿ?
ಮೊದಲಿಗೆ ಅಧಿಕೃತ ವೆಬ್​ಸೈಟ್​ಗಳಾದ
cisce.org ಅಥವಾ results.cisce.org ಗೆ ಭೇಟಿ ನೀಡಬೇಕು. ಐಸಿಎಸ್​ಇ 10ನೇ ಫಲಿತಾಂಶ 2025 ಅಥವಾ ಐಎಸ್​ಸಿ 12ನೇ ಫಲಿತಾಂಶ 2025 ಮೇಲೆ ಕ್ಲಿಕ್ ಮಾಡಬೇಕು. ಶಾಲೆ ವತಿಯಿಂದ ನೀಡಿರುವ ವಿಶಿಷ್ಟ ಐ.ಡಿ, ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿದ ಬಳಿಕ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ. ಅಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳಬಹುದು.

ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 33% ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಗಳಿಸಬೇಕು. ಫಲಿತಾಂಶಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ಮೇ 4ರ ನಂತರ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ, ಶಾಲೆ, ವಿಷಯವಾರು ಅಂಕಗಳು ಮತ್ತು ಅಂತಿಮ ಫಲಿತಾಂಶ ಒಳಗೊಂಡಿರುತ್ತದೆ. ಯಾವುದೇ ವ್ಯತ್ಯಾಸಗಳಿದ್ದಲ್ಲಿ ತಕ್ಷಣ ಶಾಲಾ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಗಿದೆ.

ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಫಲಿತಾಂಶದ ವಿಚಾರದಲ್ಲಿ ನಿರಂತರವಾಗಿ ಯಶಸ್ಸನ್ನು ಕಾಯ್ದುಕೊಂಡಿದೆ. 2024 ರಲ್ಲಿ ಒಟ್ಟಾರೆ ಉತ್ತೀರ್ಣ ಶೇಕಡಾವಾರು 99.47% ರಷ್ಟಿದ್ದು, ಹುಡುಗಿಯರು ಹುಡುಗರಿಗಿಂತ ಮೇಲುಗೈ ಸಾಧಿಸಿದ್ದರು.

 

 

Share This Article
error: Content is protected !!
";