ಬಾಲ್ಯ ವಿವಾಹ ಮಾಡಿಸಿದರೆ 1 ಲಕ್ಷ ದಂಡ, ಜೈಲು ಶಿಕ್ಷೆ-ಸಣ್ಣ ರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಹುಳಿಯಾರ್ ರಸ್ತೆ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಸಪ್ತಹ ಕಾರ್ಯಕ್ರಮಕ್ಕೆ ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ ಚಾಲನೆ ನೀಡಿದರು.

- Advertisement - 

ಈ ಕಾರ್ಯಕ್ರಮದಲ್ಲಿ ಸೇರಿರುವ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶಗಳ ಬಗ್ಗೆ ಮತ್ತು ಇತರೆ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

- Advertisement - 

ಜಿಲ್ಲಾ ಪೌಷ್ಟಿಕ ಮೇಲ್ವಿಚಾರಕಿ ಸಣ್ಣ ರಂಗಮ್ಮ  ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಭಾರತದಲ್ಲಿ ಜಾರಿಯಲ್ಲಿದ್ದು ಬಾಲ್ಯ ವಿವಾಹಗಳನ್ನು ನಿಷೇಧಿಸಲಾಗಿದೆ ಮತ್ತು ಅಂತಹ ವಿವಾಹಗಳ ಸಂತ್ರಸ್ತರಿಗೆ ರಕ್ಷಣೆ ಮತ್ತು ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದರು.

ಕಾಯಿದೆಯ ಪ್ರಕಾರ ಹುಡುಗಿಯರಿಗೆ ಕಡ್ಡಾಯವಾಗಿ 18 ಮತ್ತು ಹುಡುಗರಿಗೆ 21 ವರ್ಷ ವಯಸ್ಸಾಗಿರಬೇಕು. ಇದಕ್ಕೂ ಮುನ್ನ ಮದುವೆಯಾಗುವುದು ಅಪರಾಧ ಎಂದು ಸಣ್ಣರಂಗಮ್ಮ ಎಚ್ಚರಿಸಿದರು.

- Advertisement - 

ಬಾಲ್ಯ ವಿವಾಹದಲ್ಲಿ ಭಾಗವಹಿಸುವ ಅಥವಾ ಪ್ರೋತ್ಸಾಹಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಹಾಗಾಗಿ ಯಾರೊಬ್ಬರು ಬಾಲ್ಯ ವಿವಾಹಗಳನ್ನು ಬೆಂಬಲಿಸಬಾರದು ಎಂದು ಅವರು ಮನವಿ ಮಾಡಿದರು.

ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮವು ಬಾಲ್ಯ ವಿವಾಹದ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಆಯೋಜಿಸಲಾದ ಒಂದು ಉಪಕ್ರಮವಾಗಿದೆ. ಈ ಕಾರ್ಯಕ್ರಮವು ಬಾಲ್ಯ ವಿವಾಹವನ್ನು ತಡೆಯಲು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ.

ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಪೌಷ್ಟಕಿ ಮೇಲ್ವಿಚಾರಕಿ ಸಣ್ಣ ರಂಗಮ್ಮ ಹೇಳಿದರು.

ಬಾಲ್ಯ ವಿವಾಹವು ಕಾನೂನು ಬಾಹಿರ ಮತ್ತು ಮಕ್ಕಳಿಗೆ ಹಾನಿಕಾರಕವಾಗಿದೆ. ಅಜ್ಞಾನ, ಮೂಢ ನಂಬಿಕೆ ಮುಂದಿಟ್ಟು ಬಾಲ್ಯ ವಿವಾಹ ಮಾಡುವುದು ಅಪರಾಧ ಆಗಲಿದೆ ಎಂದು ತಿಳಿಸಿದರು.

ಸಮುದಾಯದ ಎಲ್ಲಾ ಸದಸ್ಯರು ಬಾಲ್ಯ ವಿವಾಹ ತಡೆಗಟ್ಟಲು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಬಾಲ್ಯ ವಿವಾಹವನ್ನು ತಡೆಯಲು ಇರುವ ಕಾನೂನುಗಳು ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಣ್ಣರಂಗಮ್ಮ ತಿಳಿಸಿದರು.

ಬಾಲ್ಯ ವಿವಾಹದ ಬಗ್ಗೆ ತಾಯಿಯ ಮನೆಯ ಮೊದಲ ಗುರು ಆದ್ದರಿಂದ ಮನೆಯ ಹೆಣ್ಣು ಮಗಳನ್ನು ಬಾಲ್ಯ ವಿವಾಹ ಮಾಡಿ ಸಾವಿನ ದವಡೆಗೆ ನೂಕಬೇಡಿ ಎಂದು ತಿಳಿಸಿರುತ್ತಾರೆ ಭಾಗ್ಯಲಕ್ಷ್ಮಿ ಬಾಂಡ್ ಇರುವಂತಹ ಮಹಿಳೆ ಅವಳಿಗೆ 18 ವರ್ಷದ ಮೊದಲು ಮದುವೆ ಮಾಡಿದರೆ ಭಾಗ್ಯಲಕ್ಷ್ಮಿ ಬಾಂಡ್ ಅವರಿಗೆ ತಲುಪುವುದಿಲ್ಲ ನಂತರ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಕಡಿಮೆ ಮಾಡಲು ಅನೇಕ ಕುಟುಂಬ ಯೋಜನೆಯ ವಿಧಾನವನ್ನು ಅನುಸರಿಸಿ ಜನಸಂಖ್ಯೆ ಕಡಿಮೆ ಮಾಡಬೇಕು. ಬಡತನ ನೀಗಿಸಬೇಕು ಎಂದು ತಿಳಿಸಿದರು.

ಆರೋಗ್ಯ ಸುರಕ್ಷಣಾಧಿಕಾರಿ ಗೌಸಿಯ ಬಾನು ಮಾತನಾಡಿ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಕುರಿತು ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಆಶಾ ಕಾರ್ಯಕರ್ತೆಯರಾದ ಗೀತಾ, ಮೇನಕಾ, ಲೀಲಾಂಬಿಕ ಮತ್ತಿತರರು ಇದ್ದರು.

 

 

Share This Article
error: Content is protected !!
";