ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಪ್ರಭು ಕೆಂಪೇಗೌಡರುಕಟ್ಟಿದ ಬೆಂಗಳೂರನ್ನು ಒಡೆಯಲು ರೂಪಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರದ “ಅಸಂವಿಧಾನಿಕ” ಗ್ರೇಟರ್ ಬೆಂಗಳೂರು ಮಸೂದೆಗೆ ಅಂಕಿತ ಹಾಕಬಾರದೆಂದು ಎನ್‌ಡಿಎ ಮೈತ್ರಿಕೂಟದ ಮನವಿಗೆ ರಾಜ್ಯಪಾಲರು ಸ್ಪಂದಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ದೆಹಲಿ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಪಾಲಿಕೆಗಳನ್ನು ವಿಭಜಿಸಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಬೆಂಗಳೂರನ್ನು ವಿಭಜಿಸುವುದರಿಂದ ಬೆಂಗಳೂರಿನ ಸಾಂಸ್ಕೃತಿಕ ಪರಂಪರೆ ನಾಶವಾಗಲಿದೆ. ಒಂದೇ ಆಡಳಿತ ಮಂಡಳಿಯ ಅಡಿಯಲ್ಲಿ 7 ಪಾಲಿಕೆಗಳನ್ನು ರಚಿಸಲು ನಿರ್ಧರಿಸಿರುವುದು ಅಸಂವಿಧಾನಿಕವಾಗಿತ್ತು ಎಂದು ಬಿಜೆಪಿ ದೂರಿದೆ.
ಇದೀಗ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಸೃಷ್ಟಿಕರಣ ಕೇಳಿ, ಅಂಕಿತ ಹಾಕದೇ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಜನತೆಯ ವಿರೋಧದ ನಡುವೆ ಬಿಲ್ ಪಾಸ್ ಮಾಡಿಕೊಂಡಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಬಿಜೆಪಿ ತರಾಟೆ ತೆಗೆದುಕೊಂಡಿದೆ.