ಚಂದ್ರವಳ್ಳಿ ನ್ಯೂಸ್, ದೊಡ್ಡಬ್ಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ,ದೊಡ್ಡಬೆಳವಂಗಲ ಹೋಬಳಿಯ ಮಧುರನ ಹೊಸಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗಿರುವ 35 ಲಕ್ಷ ಮೌಲ್ಯದ ಬೃಹತ್ ಹೈ ಮಾಕ್ಸ್ ಲೈಟ್, ಸಿಸಿ ಕ್ಯಾಮೆರಾ, ಸೋಲಾರ್ ಲೈಟ್, ಶಾಲೆಗೆ ಡಸ್ಕ್, ವಾಟರ್ ಫಿಲ್ಟರ್, ವ್ಯಾಯಾಮ ಉಪಕರಣಗಳನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜ್ ರವರು ಉದ್ಘಾಟಿಸಿದರು.
ಅವರು ಮಾತನಾಡಿ ಸಮಾಜದ ಯುವ ಪೀಳಿಗೆಗೆ ಅರೋಗ್ಯ ಸ್ಥಿರವಾಗಿರಬೇಕಾದರೆ ದೇಹ ದಂಡನೆ ಮಾಡಿದರೆ ಮಾತ್ರ ಸಾದ್ಯ ಎಂದರು
ಗ್ರಾಮಸ್ಥರಿಂದ ಶುದ್ದ ನೀರಿನ ಘಟಕ ನವೀಕರಣ ಮಾಡುವಂತೆ ಮತ್ತು ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಶಾಸಕ ಅನುದಾನದಲ್ಲಿ ಗ್ರಾಮದಲ್ಲಿ ಮತ್ತಷ್ಟು ಕಾಮಗಾರಿಗಳನ್ನು ಮಾಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಮಧುರನ ಹೊಸಹಳ್ಳಿ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ. ಹಾಗು ಕುಗ್ರಾಮ ವಾದ್ದರಿಂದ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಹೆಚ್.ಜಿ ಮಧುರನ ಹೊಸಹಳ್ಳಿ ಗ್ರಾಮದ ಸದಸ್ಯೆ ಶಿಲ್ಪ.ಜಿ ಮುನಿಯಪ್ಪ, ಬಿ ಜೆ ಪಿ ತಾಲೂಕು ಅಧ್ಯಕ್ಷ ನಾಗೇಶ್, ಗುತ್ತಿಗೆದಾರ ಹೇಮಂತ್ ತಿಪ್ಪಗೊಂಡನಹಳ್ಳಿ, ಗ್ರಾಮದ ನಿವೃತ್ತ ಶಿಕ್ಷಕ ದಿ. ಗಂಗಣ್ಣ ರವರ ಪತ್ನಿ ಲಕ್ಷ್ಮಮ್ಮ, ಎರಡು ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಗ್ರಾಮದ ಮುಖಂಡರು ಉಪಸ್ಥಿತಿ ಇದ್ದರು.