ಶೇ.60ರಷ್ಟು ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಬಳಿ ಸಾಕ್ಷಿ ಇದ್ದರೆ ಕೊಡಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೇ.60ರಷ್ಟು ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಸಾಕ್ಷಿ ಇದ್ದರೆ ಕೊಡಲಿ
ಎಂದು ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು.‌

ಸದಾಶಿವನಗರ ನಿವಾಸದ ಬಳಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ತಮ್ಮ ಮಗನ ಸೋಲಿನ ಹತಾಶೆಯಲ್ಲಿದ್ದಾರೆ. ಹಾಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ.

ಕುಮಾರಸ್ವಾಮಿಯವರಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಅವರಿಗೆ, ಅವರ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಿದ್ದು, ಹತಾಶೆ ಶುರುವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ. ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ನೋಡೋಣ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ. ಇವರ ಆರೋಪಕ್ಕೆ ಸಾಕ್ಷಿ ಕೊಡಲಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯ ಸೋಲಿನ ಹತಾಶೆಯಲ್ಲಿದ್ದಾರೆ. ನಿಖಿಲ್ ಬಗ್ಗೆ ನನಗೆ ಸಹಾನುಭೂತಿ ಇದೆ ಎಂದು ಎಂ.ಬಿ ಪಾಟೀಲ್ ತಿಳಿಸಿದರು.

ರಾಜ್ಯ ಸರ್ಕಾರದಿಂದ ಉಕ್ಕು ಕಾರ್ಖಾನೆ ಸಂಬಂಧ ಬೇಡಿಕೆ ಬಂದಿಲ್ಲ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲ್ ಕೇಂದ್ರಕ್ಕೆ ನಾವು ಪತ್ರ ಬರೆದಿದ್ದೇವೆ. ಸೆಮಿಕಂಡೆಕ್ಟರ್​​ಗೆ ಅವಕಾಶ ಕೊಡಿ ಅಂತ. ಎಲ್ಲಾ ಕಂಪನಿಗಳನ್ನು ಗುಜರಾತ್​​ಗೆ ಕರೆದುಕೊಳ್ಳುತ್ತಿದ್ದಾರೆ. ಎಲ್ಲವೂ ಗುಜರಾತ್​​ಗೆ ಹೋಗುತ್ತಿವೆ. ಅವರು ಇನ್ಸೆಂಟೀವ್ ಜಾಸ್ತಿ ಕೊಡುತ್ತಾರೆ ಅಂತ ಹೀಗಾಗುತ್ತಿದೆ.‌ನಮ್ಮಲ್ಲಿ ಜಿಂದಾಲ್ ಸೇರಿ ಹಲವು ಕಂಪನಿಗಳಿವೆ ಎಂದು ಅವರು ತಿಳಿಸಿದರು.

ಹಿಟ್ ಆ್ಯಂಡ್ ರನ್ ಸರಿಯಲ್ಲ: ಸರ್ಕಾರದ ನಡೆಯ ಬಗ್ಗೆ ಗುತ್ತಿಗೆದಾರರ ಅಸಮಾಧಾನ ವಿಚಾರವಾಗಿ ಮಾತನಾಡಿ, ಯಾವ ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ. ಅಂತವರ ಲೀಸ್ಟ್ ಕೊಡಲಿ. ನಾವು ಕ್ರಮ ಜರುಗಿಸುತ್ತೇವೆ. ಸುಮ್ಮನೆ ಹಿಟ್ ಆ್ಯಂಡ್ ರನ್ ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದ್ರು?. ಅವರು ಕಾಂಟ್ರಾಕ್ಟರ್ ಅಲ್ವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಂತದ್ದೇನಿಲ್ಲ ಎಂದು ಹೇಳಿದರು.

ಮುಂದಿನ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿ, ಚರ್ಚೆ ಬಂದಾಗ ನೋಡೋಣ. ಕ್ಯಾಬಿನೆಟ್​​​ನಲ್ಲಿ ವಿಷಯ ಬರಲಿ. ವಿಷಯ ನೋಡದೇ ಮಾತನಾಡುವುದು ಮೂರ್ಖತನ ಆಗುತ್ತದೆ. ವರದಿ ನೋಡಿದ ಮೇಲೆ ನಾನು ಮಾತಾಡುತ್ತೇನೆ ಎಂದು ತಿಳಿಸಿದರು.

ಸಿಎಂ ಪರ್ಫೆಕ್ಟ್: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಎಂಬ ಶಾಸಕರ ಆರೋಪವಾಗಿ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೂ ಹಣ ಇದೆ, ಗ್ಯಾರಂಟಿ ಯೋಜನೆಗಳಿಗೂ ಹಣ ಇದೆ. ನೀರಾವರಿಗೆ ಹಣ ಕೇಳುತ್ತಾರೆ ಎಂದು ಪಾಟೀಲ್ ತಿಳಿಸಿದರು.

ಹಿಂದಿನ ಸರ್ಕಾರ ಬೇಕಾಬಿಟ್ಟಿ ಸಾಲ ಮಾಡಿದೆ. ಆ ಸರ್ಕಾರದಲ್ಲಿ ಆರ್ಥಿಕ ಶಿಸ್ತು ಮೀರಿ‌ಹೋಗಿತ್ತು. 70 ಸಾವಿರ ಕೋಟಿ ರೂ. ಸಾಲ ಮಾಡಿತ್ತು. ಅವರು ಮಾಡಿರುವುದು ಎಕ್ಸಸ್ ಬಿಲ್ ಉಳಿದಿದೆ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಬಿಲ್​​ಗಳಿವೆ. ಅವರು ಹಣ ಪೆಂಡಿಂಗ್ ಇಟ್ಟು ಹೋದರು. ನಮ್ಮ ಸಿಎಂ ಹಣಕಾಸು ವಿಚಾರದಲ್ಲಿ ಪರ್ಫೆಕ್ಟ್. ಹಣ ಹೊಂದಿಸುವುದು ಗೊತ್ತಿದೆ. ಎಲ್ಲ ಸರಿಪಡಿಸಿಕೊಂಡು ಹೋಗುತ್ತೇನೆ ಅಂದಿದ್ದಾರೆ‌. ಈಗ ಅದನ್ನು ಮಾಡುತ್ತಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ್​ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

 

- Advertisement -  - Advertisement - 
Share This Article
error: Content is protected !!
";