ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಕ್ಕಲಿಗ ಸ್ವಾಮೀಜಿಗಳು ಡಿಸಿಎಂ ಡಿಕೆ ಶಿವಕುಮಾರ್ಗೆ ಬೆಂಬಲ ವ್ಯಕ್ತಪಡಿಸಿದ್ದರ ಹಿನ್ನೆಲೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದರು.
ನಗರದಲ್ಲಿ ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ ಮಾತನಾಡಿ, ಪಾಪ ಕುಮಾರಣ್ಣನಿಗೆ ಎರಡನೇ ಮಠ ಹೇಗಾಯ್ತು? ಸ್ವಾಮೀಜಿಗಳು ಇಲ್ಲದೇ ಹೋಗಿದ್ದರೆ ಸಿಎಂ ಆಗ್ತಿದ್ರಾ ದೇವೇಗೌಡ್ರು?
ಅವತ್ತು ಸ್ವಾಮೀಜಿ ರಸ್ತೆಗಿಳಿಲಿಲ್ವಾ? ಡಿವಿಎಸ್ಗೆ ತೊಂದರೆಯಾದಾಗ ಸ್ವಾಮೀಜಿ ಸುಮ್ನೆ ಕುಳಿತಿದ್ರಾ? ಕೆಲವು ಸಂದರ್ಭದಲ್ಲಿಸ್ವಾಮೀಜಿಗಳು ಮಾತನಾಡಿದ್ದಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರಿಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

