ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದೇಶಗಳಿಂದ ಹಣಕಾಸು ನೆರವು ಸಿಗುತ್ತಿರುವ ಕಾರಣದಿಂದ ಕರಾವಳಿಯಲ್ಲಿ ಧರ್ಮಾಧಾರಿತ ಹತ್ಯೆ ನಡೆಯುತ್ತಿದೆ ಎಂದು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ತಿಳಿಸಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದು ಕೂಡಾ ಇದೇ ಕಾರಣಕ್ಕಾಗಿ ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ಪಕ್ಷವೇ ರಚಿಸಿದ ಸತ್ಯಶೋಧನಾ ಸಮಿತಿ ವರದಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡ ಬಹಿರಂಗವಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಮಾತ್ರ ಹಿಂದೂ ಸಂಘಟಕರ ಮನೆಗಳಿಗೆ ಪೊಲೀಸರನ್ನು ನುಗ್ಗಿಸಿ, ಭಾಷಣಗಳಿಗೆ ಎಫ್‌ಐಆರ್ ಜಡಿಯುತ್ತಾ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕೋಮು ನಿಗ್ರಹ ದಳದ ಬದಲು ಧಾರ್ಮಿಕ ಹತ್ಯೆಗೆ ಕಾರಣವಾಗುತ್ತಿರುವ ವಿದೇಶಿ ಶಕ್ತಿಗಳನ್ನು ಸರ್ಕಾರ ಬಗ್ಗುಬಡಿಯಲಿ, ಗೋಕಳ್ಳತನ, ಅಕ್ರಮ ಮರಳುಗಾರಿಕೆ, ಲವ್ ಜಿಹಾದ್ ಪ್ರಕರಣಗಳನ್ನು ಹಿಮ್ಮೆಟ್ಟಿಸಿದರೆ ಕರಾವಳಿ ಶಾಂತವಾಗುತ್ತದೆ ಎಂದು ಬಿಜೆಪಿ ಹೇಳಿದೆ.