ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಶ್ರೀರಾಮುಲು ಅವರನ್ನ ಮುಟ್ಟಲಿ 

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಮುಟ್ಟಲಿ ನೋಡೋಣ ಎಂದು ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಸವಾಲ್ ಹಾಕಿದ್ದಾರೆ.

ಬಳ್ಳಾರಿಗೆ ಹೋಗುವ ಮಾರ್ಗ ಮಧ್ಯೆ ರಾಂಪುರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದುಳಿದ ಹಾಗೂ ದಲಿತ ಸಮುದಾಯದ ಮೇರು ನಾಯಕ ಬಿ. ಶ್ರೀರಾಮುಲು ಅವರ ಮೇಲೆ ಫೋಕ್ಸೊ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಿ ಅವರ ನಾಯಕತ್ವವನ್ನು ದಮನ ಮಾಡುವಂತ ಕೆಲಸಕ್ಕೆ ಕೈ ಹಾಕಿರುವಂಥ ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜೇನುಗೂಡಿಗೆ ಕಲ್ಲೆಸೆದಂತಾಗಿದೆ ಎಂದು ಬಿಜೆಪಿ ಮುಖಂಡ  ಪ್ರಭಾಕರ ಮ್ಯಾಸನಾಯಕ ಖಂಡಿಸಿದರು.

- Advertisement - 

ರಾಜ್ಯದಲ್ಲಿ ಸತ್ಯ ಹೇಳಿದವರ ಮೇಲೆ ಕೇಸು ನಮೂದು ಮಾಡುವಂಥ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾತನಾಡಿರುವ ನಮ್ಮ ನಾಯಕ ಶ್ರೀರಾಮುಲು ಅವರ ಮೇಲೆ  ಕೇಸು ನಮೂದು ಮಾಡುವ ಮುಖೇನ ಅವರ ಧ್ವನಿಯನ್ನು ಅಡಗಿಸುವಂತಹ ಕೆಲಸಕ್ಕೆ ಕೈ ಹಾಕಿ ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ದಮ್ಮು ತಾಕತ್ತಿದ್ದರೆ ಅವರನ್ನು ಬಂಧಿಸಲಿ ನೋಡೋಣ ಎಂದು ಪ್ರಭಾಕರ್ ಹೇಳಿದ್ದಾರೆ.

ಶ್ರೀರಾಮುಲು ಅವರನ್ನು ಬಂಧಿಸಿದ್ದೇ ಆದಲ್ಲಿ ಮುಂದೆ ರಾಜ್ಯದಲ್ಲಿ ಆಗುವಂತ ಅನಾಹುತಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ  ಎಂದು ಪ್ರಭಾಕರ ಎಚ್ಚರಿಸಿದರು.

- Advertisement - 

 ಬಳ್ಳಾರಿಯಲಿ ಆಗಿರುವಂತಹ ಗಲಭೆಯು ರಾಜ್ಯ ಕ್ಷಮಿಸಲಾರದಂತ ಅಪರಾಧ ಆಗಿದೆ. ಮಾಜಿ ಸಚಿವರು ಹಾಗೂ ಈ ರಾಜ್ಯ ಕಂಡಂತ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರ ಬಗ್ಗೆ ಅತ್ಯಂತ ತುಚ್ಚವಾಗಿ ಲಘುವಾಗಿ ಮಾತನಾಡಿರುವಂತ ಬಳ್ಳಾರಿ ನಗರ ಶಾಸಕರಿಗೆ ಅಕ್ಷರಶಃ ನೀತಿ ಪಾಠ ಹೇಳುವಂತಹ ಅವಶ್ಯಕತೆ ಇದೆ.

ಶಾಸಕರ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಹಾಗೂ ಸಮಾಜದಲ್ಲಿ ಶಾಸಕರ ನಡವಳಿಕೆ ಹೇಗಿರಬೇಕು ಎಂಬುದರ ಬಗ್ಗೆ  ಕಾಂಗ್ರೆಸ್ ಶಾಸಕರಾದ ಭರತ್ ರೆಡ್ಡಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ರಾಮನಗರ ಶಾಸಕ ಇಕ್ಬಾಲ್ ಅಹಮದ್, ಮಂಡ್ಯ ನಗರ ಶಾಸಕ ಗಣಿಗ ರವಿ ಇವರಿಗೆ ಸೂಕ್ತ ತರಬೇತಿ ಕೊಡಿಸುವಂತೆ ವಿಧಾನಸಭೆಯ ಸಭಾಧ್ಯಕ್ಷರಲ್ಲಿ ಪ್ರಭಾಕರ ಮನವಿ ಮಾಡಿದ್ದಾರೆ.

 2028 ರಲ್ಲಿ ರಾಜ್ಯದಲ್ಲಿ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರವು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಪ್ರಭಾಕರ್ ವಿಶ್ವಾಸ ವ್ಯಕ್ತಪಡಿಸಿದರು.

 ನಾನು ಪಕ್ಷನಿಷ್ಠ ಕಾರ್ಯಕರ್ತ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲೂ ಕೂಡ 2028 ರಲ್ಲಿ ಭಾಜಪ ಶಾಸಕರು ಇರುವುದು ಕೂಡ ಅಷ್ಟೇ ಸತ್ಯ ಎಂದರು.

 ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ತಿಪ್ಪೇಸ್ವಾಮಿ ಮಾರನಾಯಕ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರಾದ ಹೊನ್ನೂರ್ ಸ್ವಾಮಿ, ಭರತೇಶ್, ಲಲಿತ ಮುಖಂಡರಾದ ನರಸಿಂಹಮೂರ್ತಿ, ವಿನಾಯಕ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Share This Article
error: Content is protected !!
";