ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು ವಿಷ ಸೇವಿಸಿದ್ದು. ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿಯ ದಾನವಾಡಿಯ ಜಯಲಕ್ಷ್ಮಿ ಮತ್ತು ಚರಣ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದು ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಇದಾದ ನಂತರ ಗಂಡನ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ದಾನವಾಡಿಯಲ್ಲಿದ್ದ ಜಯಲಕ್ಷ್ಮಿ ಅವರು ಕೌಟುಂಬಿಕ ಕಲಹವನ್ನು ತಿಳಿಗೊಳಿಸಿ ಎಂದು ಗಂಡನ ಊರಾದ ಆನಂದಪುರದ ದಾಸನಕೊಪ್ಪದ ದೇವಸ್ಥಾನಕ್ಕೆ ಮನವಿ ಮಾಡಿದ್ದರು. ನಿಗದಿಯಾದ ದಿನಾಂಕದಂದು ಇತ್ಯರ್ಥಗೊಳಿಸಲಾಗಿತ್ತು.
ಆದರೆ ಮಾವ ಸುಧಾಕರ್ ನಂತರ ಹೋಗಿ ಗಲಾಟೆ ಮಾಡಿದ ಪರಿಣಾಮ ಸೊಸೆ ಜಯಲಕ್ಷ್ಮಿ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಮಾವನೂ ಸಹ ಫಿನಾಯಿಲ್ ಸೇವಿಸಿರುವುದಾಗಿ ಹೇಳಲಾಗುತ್ತಿದೆ. ಇಬ್ಬರೂ ಮೆಗ್ಗಾನ್‌ಗೆ ದಾಖಲಾಗಿದ್ದಾರೆ.