ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ತೆರವುಗೊಳಿಸದಿದ್ದಲ್ಲಿ ಮಾಲೀಕರೆ ಹೊಣೆ: ಎ.ವಾಸೀಂ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವು ಮಾಡಿ ಜೀವ ಹಾನಿ ತಪ್ಪಿಸುವ ಹೊಣೆಗಾರಿಕೆ ಆಸ್ತಿ ಮಾಲೀಕರದಾಗಿದೆ ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಎಚ್ಚರಿಸಿದರು.

ಹಿರಿಯೂರು ನಗರದ ವಿವಿಧ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಮಳೆ ಮತ್ತಿತರ ಕಾರಣಗಳಿಂದ ಬಾಡಿಗೆದಾರರಿಗೆ ಅಥವಾ ಸಾರ್ವಜನಿಕರಿಗೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದ ಜೀವ ಹಾನಿ ಸಂಭವಿಸಿದರೆ ಅದಕ್ಕೆ ಆಸ್ತಿ ಮಾಲೀಕರನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ಆದ್ದರಿಂದ ಅಂತಹ ಕಟ್ಟಡಗಳನ್ನು ಧ್ವಂಸ ಮಾಡಿಕೊಳ್ಳಬೇಕು ಎಂದು ಪೌರಾಯುಕ್ತ ವಾಸೀಂ ಕರೆ ನೀಡಿದರು.
ನಗರದ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಕಟ್ಟಡ ಮಾಲೀಕರಿಗೆ ಹಾಗೂ ಬಾಡಿಗೆ ಪಡೆದಿರುವ ಬಾಡಿಗೆದಾರರಿಗೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಸತತ ಮಳೆಯಾಗುತ್ತಿರುವ ಕಾರಣ ಹಲವಾರು ಕಟ್ಟಡಗಳು ಬೀಳುವ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ಆಸ್ತಿ ಮಾಲೀಕರು ವಾಣಿಜ್ಯ, ವಾಸ ಇತರೆ ಉಪಯೋಗಕ್ಕೆ ಬಳಸುತ್ತಿರುವ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಅಧಿನಿಯಮಗಳ 228 229 230 ಮತ್ತು 231ರೀತ್ಯಾ ಸ್ವಷ್ಟ ಉಲ್ಲಂಘನೆ ಆಗಿರುವುದು ಕಂಡುಬಂದಿದ್ದು ಆಸ್ತಿ ಮಾಲೀಕರು ಸದರಿ ಶಿಥಿಲಾ ವವಸ್ಥೆಯಲ್ಲಿರುವ ಉಪಯೋಗಕ್ಕೆ ಯೋಗ್ಯವಲ್ಲದ ಕಟ್ಟಡಗಳಲ್ಲಿ ವಾಸ ಮಾಡುವುದು ವಾಣಿಜ್ಯ ವ್ಯವಹಾರ ಮಾಡುವುದು ಅಪಾಯಕಾರಿಯಾಗಿದ್ದು ಪ್ರಾಣ ಹಾನಿಯಾಗುವಂತಹ ಸಂದರ್ಭಗಳು ತುಂಬಾ ಹೆಚ್ಚುಗಿದ್ದು ತುರ್ತಾಗಿ ಅಪಾಯ ಮಟ್ಟದಲ್ಲಿರುವ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿ ಮುಂದಾಗುವ ಅನಾಹುತಗಳಿಗೆ ಕಟ್ಟಡ ಮಾಲೀಕರು ಜವಾಬ್ದಾರರಾಗಿರುತ್ತಾರೆ ಎಂದು ನಗರಸಭೆ ಪೌರಾಯುಕ್ತರು ಎ ವಾಸೀಂ ತಿಳಿಸಿದ್ದಾರೆ.

ಕಟ್ಟಡಗಳು ಮಾಲೀಕರು ಎಚ್ಚೆತ್ತುಕೊಂಡು ಬೀಳುವ ಪರಿಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಿ ಮುಂದಾಗುವ ಅನಾಹುತಗಳು ತಪ್ಪಿಸಿದರೆ ನಿಮಗೆ ಒಳ್ಳೆಯದು ಕಟ್ಟಡ ನೆಲಸಮ ಮಾಡಿದ್ದಲ್ಲಿ ಅನಾಹುತಗಳ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಕಟ್ಟಡ ಮಾಲೀಕರಗಳ ಮೇಲೆ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರದ ವ್ಯಾಪ್ತಿಯಲ್ಲಿ ಬೀಳುವ ಪರಿಸ್ಥಿತಿಯಲ್ಲಿರುವ ಕಟ್ಟಡಗಳನ್ನು ಮಾಲೀಕರು ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಿ ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಕಟ್ಟಡ ಮಾಲೀಕರು ಹಾಗೂ ಬಾಡಿಗೆದಾರರ ಮೇಲೆ ಕಾನೂನು ಅನುಸರಿಸಿ ಕ್ರಮ ವಹಿಸಲಾಗುವುದು”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

Share This Article
error: Content is protected !!
";