ಪಕ್ಷದ ಸಂಘಟನೆ ಮಾಡದವರು ನಿವೃತ್ತಿ ಆಗಲಿ-ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್:
ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸದರು, ಪಕ್ಷದ ಸಂಘಟನೆಗೆ ಕೆಲಸ ಮಾಡದಿರುವವರು ಕೂಡಲೇ ವಿಶ್ರಾಂತಿ ಪಡೆಯಲಿ. ಹಾಗೆಯೇ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ ಅಂಥವರು ನಿವೃತ್ತಿ ಹೊಂದಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಖಡಕ್‌ಎಚ್ಚರಿಕೆ ನೀಡಿದ್ದಾರೆ.

ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾಂಗ್ರೆಸ್‌ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲಿ ಅವರು ಮಾತನಾಡಿ, ಪಕ್ಷದ ಬಲವರ್ಧನೆ ಹಾಗೂ ಸಂಘಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ಸಮಿತಿಗಳ ಅಧ್ಯಕ್ಷರ ಪಾತ್ರ ದೊಡ್ಡದಿದೆ. ಹಾಗಾಗಿ, ಎಐಸಿಸಿ ಮಾರ್ಗಸೂಚಿಯಂತೆ ಜಿಲ್ಲಾಧ್ಯಕ್ಷರ ನೇಮಕವನ್ನು ಕಟ್ಟುನಿಟ್ಟಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಖರ್ಗೆ ಅವರು ತಾಕೀತು ಮಾಡಿದರು.

ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡು ಜವಾಬ್ದಾರಿ ಹೊತ್ತವರು ಒಂದು ವರ್ಷದೊಳಗೆ ಜನರನ್ನು ಸೇರಿಸಿಕೊಂಡು ಬೂತ್‌ಸಮಿತಿ, ಮಂಡಲ್‌ಸಮಿತಿ, ಬ್ಲಾಕ್‌ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ರಚಿಸಿ ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಭವಿಷ್ಯದಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸೂಚ್ಯವಾಗಿ ಹೇಳಿದರು.

ರಾಷ್ಟ್ರೀಯತೆ ಎಂದರೆ ಕಾಂಗ್ರೆಸ್‌ಪಾಲಿಗೆ ಜನರನ್ನು ಒಗ್ಗೂಡಿಸುವುದಾಗಿದೆ. ಆದರೆ ಬಿಜೆಪಿ – ಆರೆಸ್ಸೆಸ್‌ನದ್ದು ಹುಸಿ ರಾಷ್ಟ್ರೀಯತೆ ಆಗಿದೆ ಎಂದು ಕಾಂಗ್ರೆಸ್‌ಕಿಡಿಕಾರಿದೆ. ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಸಂವಿಧಾನದ ಆಶಯ ಬುಡಮೇಲು ಮಾಡುವ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೇಂದ್ರದ ನಡೆಯ ವಿರುದ್ಧ ಕಾಂಗ್ರೆಸ್‌ನ್ಯಾಯಪಥದಲ್ಲಿ ಹೋರಾಟ ನಡೆಸಲಿದೆ ಎಂದು ಕಾರ್ಯಕಾರಿಣಿ ನಿರ್ಣಯ ಕೈಗೊಂಡಿದೆ.

ಬಿಜೆಪಿಯವರು ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇವರಲ್ಲಿ ಬಹುತೇಕರು ಭಯದಿಂದ ಬದುಕುವಂತೆ ಮಾಡಲಾಗುತ್ತಿದೆ ಎಂಬುದು ಕಟು ಸತ್ಯ. ಇದು ಅಪಮಾನಕರ ಮಾತ್ರವಲ್ಲ, ಸಂವಿಧಾನದ ವಿರುದ್ದದ ಅಪರಾಧ ಎಂದೂ ನಿರ್ಣಯ ಹೇಳಿದೆ.

 

 

Share This Article
error: Content is protected !!
";