ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ವಕ್ಫ್‌ಬೋರ್ಡ್‌ಕರ್ನಾಟಕದ ಆಸ್ತಿಗಳನ್ನು ಕಬಳಿಸುವುದನ್ನು ಬಿಡುವುದಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇದೀಗ ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಶ್ರೀರಂಗಪಟ್ಟಣದ 65ಕ್ಕೂ ಹೆಚ್ಚು ಐತಿಹಾಸಿಕ ಆಸ್ತಿಗಳನ್ನು ವಕ್ಫ್‌ಬೋರ್ಡ್‌ತನ್ನ ಹೆಸರಿಗೆ ಪಡೆದುಕೊಂಡಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕನಿಂದ ರಾತ್ರೋ ರಾತ್ರಿಯೇ ವಕ್ಫ್‌ಬೋರ್ಡ್‌ಆಸ್ತಿಗಳ ಮೇಲೆ ತನ್ನ ಹಸಿರು ಮುದ್ರೆಯನ್ನು ಒತ್ತುತ್ತಿದೆ. ಕರ್ನಾಟಕದ ಸಂಪತ್ತು ಉಳಿಯಬೇಕಾದರೆ ಮೊದಲು ಕಾಂಗ್ರೆಸ್‌ನಿರ್ನಾಮ ಆಗಬೇಕಿದೆ ಎಂದು ಬಿಜೆಪಿ ತಾಕೀತು ಮಾಡಿದೆ.