ಪೊಲೀಸ್ ವಾರ್ನಿಂಗ್, ಆಟೋಗಳಲ್ಲಿ ಸೂಕ್ತ ದಾಖಲೆಗಳಿಲ್ಲದಿದ್ದರೆ ಬೀಳುತ್ತೆ ದಂಡ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಿನ ನಿತ್ಯ ಟ್ರಾಫಿಕ್
 ಸಮಸ್ಯೆಯಿಂದ ಸಾರ್ವಜನಿಕವಾಗಿ ತುಂಬಾ ತೂಂದರೆ ಯಾಗುತ್ತಿದ್ದರಿಂದ ಚಾಲನ ಪರವಾನಿಗೆ, ವಿಮೆ, ವಾಹನ ಸರಿಯಾಗಿದೆ ಎಂಬ ಪ್ರಮಾಣ ಪತ್ರ  ಇತರೆ ದಾಖಲೆಗಳು ಇಲ್ಲದೆ ಜನರನ್ನ ಸಾಗಿಸುವ ಆಟೋಗಳು ರಸ್ತೆಗೆ ಇಳಿದಿದ್ದು ಇದರ ಬಗ್ಗೆ  ಕ್ರಮ ವಹಿಸುವಂತೆ  ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೂಚನೆ ಮೇರೆಗೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ನಗರದ ಡಿ ಕ್ರಾಸ್ ಬಳಿ ತಡೆದು ಪರಿಶೀಲನೆ ನಡೆಸಲಾಯಿತು.  ಪರವಾನಿಗೆ ವಿಮೆ ವಾಹನ ಸರಿಯಾಗಿದೆಯ ಎಂದ ಪ್ರಮಾಣ ಪತ್ರ ಇಲ್ಲದ ಆಟೋಗಳನ್ನು ವಶಕ್ಕೆ ಪಡೆಯಲಾಯಿತು.

ಆಟೋ ರಿಕ್ಷಾಗಳು ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಸಂಚರಿಸುತ್ತಿರುವ ಪರಿಣಾಮ ಸಂಚಾರ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದು, ಎಲ್ಲೆಂದರಲ್ಲಿ ಏಕಾಏಕಿ ನಿಲ್ಲಿಸುವ ಮೂಲಕ ಸಂಚಾರ ನಿಯಮ ಪಾಲಿಸದೇ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಸಾರ್ವಜನಿಕ ರಿಂದ‌ಬಂದ ದೂರಿನ ಮೇರೆಗೆ  ಪೊಲೀಸರು ಆಟೋ ರಿಕ್ಷಾಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಪೊಲೀಸರು ಎಷ್ಟೇ ಎಚ್ಚರಿಕೆ ಸೂಚನೆ ನೀಡಿದರೂ ಬಹುತೇಕ ಆಟೋ ಚಾಲಕರು ಸಮವಸ್ತ್ರ ಧರಿಸದೇ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಪೊಲೀಸರ ಕಣ್ಣು ತಪ್ಪಿಸಿ ಕಾನೂನು ಬಾಹಿರವಾಗಿ ಆಟೋ ಓಡಿಸುವವರ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಅಗತ್ಯವಾಗಿದೆ.

ಆಟೋ ರಿಕ್ಷಾ ಚಾಲಕರಿಗೆ ಜಾಗೃತಿ ಮೂಡಿಸುವ ಜೊತೆಗೆ ದಾಖಲೆ ಪತ್ರಗಳಿಲ್ಲದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದು,ಆಟೋ ರಿಕ್ಷಾ ಚಾಲಕರು ಸಂಚಾರ ನಿಯಮ ಪಾಲಿಸಬೇಕು ಸಾರ್ವಜನಿಕರಿಗೆ ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.

 

Share This Article
error: Content is protected !!
";