ವೈಎಎನ್ ಕೂಡಲೇ ಕ್ಷಮೆ ಕೇಳದಿದ್ದರೆ ಧರಣಿ ಮಾಡಲಾಗುತ್ತದೆ-ರಫೀ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿಕ್ಷಕರಿಗೆ ಮೋಸ ಮಾಡಿ ಜಾತಿ ಹೆಸರು ಬಳಸಿ ಗೆದ್ದಿರುವ ಎಂಎಲ್ಸಿ ಡಿ.ಟಿ.ಶ್ರೀನಿವಾಸ್ ಎಲ್ಲಿದ್ದಾರೆ ಎಂದು ಮಾಜಿ ಎಂಎಲ್ ಸಿ ವೈ.ಎ ನಾರಾಯಣಸ್ವಾಮಿ ಯವರ ಹೇಳಿಕೆ ಖಂಡಿಸಿ
, ಕ್ಷಮೆ ಕೇಳಲು ಒತ್ತಾಯಿಸಿ ಸಾಂಕೇತಿಕ ಧರಣಿ ನಡೆಸಲಾಗುತ್ತದೆ ಎಂದು ಹಿರಿಯೂರು ಅರ್ಬನ್ ಕೋ ಆಪರೇಟೀರ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮೊಹಮ್ಮದ್ ರಫೀ ಎಚ್ಚರಿಸಿದ್ದಾರೆ.

ನಾರಾಯಣಸ್ವಾಮಿ ರವರು ಚುನಾವಣೆಯಲ್ಲಿ ಸೋತು ಭ್ರಮನಿರಸನಗೊಂಡಿದ್ದಾರೆ.  ತಾವು ಜವಾಬ್ದಾರಿ ಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡುವ ಮೂಲಕ ಅಹಿಂದ ವರ್ಗಕ್ಕೆ ಅವಮಾನ ಮಾಡಿರುವುದನ್ನು ಅವರು ಖಂಡಿಸಿದ್ದಾರೆ.
ವೈ.ಎ ನಾರಾಯಣಸ್ವಾಮಿ ಅವರು ತಕ್ಷಣ ಕ್ಷಮೆ ಕೇಳದಿದ್ದರೆ
, ಅವರ ನಿವಾಸದ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು, ತಾವು 40 ವರ್ಷ ಎಂ.ಎಲ್.ಸಿ.ಯಾಗಿ ಮಾಡಿರುವ ಸಾಧನೆ ಶೂನ್ಯ ಎಂಬುದು ಚಿತ್ರದುರ್ಗ ಜಿಲ್ಲೆಯ ಶಿಕ್ಷಕರಿಗೆ ಗೊತ್ತಿರುವ ವಿಚಾರ. 

- Advertisement - 

ಮಿಸ್ಟರ್ ನಾರಾಯಣಸ್ವಾಮಿ ರವರೇ ಡಿ.ಟಿ.ಶ್ರೀನಿವಾಸ್ ರವರು ಈ ಮೊದಲು ಬಾರಿ ವಿಜೇತರಾಗಿ ೧ ವರ್ಷ ಕಳೆದಿದೆಮೊನ್ನೆ ತಾನೇ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಬಗ್ಗೆ ಶಿಕ್ಷಣ ಸಚಿವರ ಬಳಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿದ್ದಾರೆ.  ಡಿ.ಟಿ.ಶ್ರೀನಿವಾಸ್‌ರವರ ಎಸ್‌ಇಎ ಕಾಲೇಜಿನಲ್ಲಿ ರಾಜ್ಯಾದ್ಯಂತ ದೇಶದ್ಯಾಂತ ಅತೀ ಕಡಿಮೆ ಫೀ ಪಡೆದು ಬಡವರಿಗೂ, ದೀನದಲಿತರಿಗೂ, ಅಲ್ಪಸಂಖ್ಯಾತರಿಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಹಾಗೂ

ಇವರ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಾವಿರಾರು ಬಡಬಗ್ಗರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ. ಡಿ.ಟಿ.ಶ್ರೀನಿವಾಸ್‌ರವರು ಮತ್ತು ಅವರ ಪತ್ನಿ ಪೂರ್ಣಿಮಾ ಶ್ರೀನಿವಾಸ್‌ರವರು ಶಾಸಕರಾಗಿ ಕೆಲಸ ಮಾಡಿರುವ ಸಾಧನೆಗಳ ಬಹಳ ಇತಿಹಾಸವಿದೆ. ನಾರಾಯಣಸ್ವಾಮಿ ಇವರು ಪತ್ರಿಕೆಯಲ್ಲಿ ಅವರುಗಳ ಮೇಲೆ ಮಾಡಿರುವ ಆಕ್ಷೇಪ ಸತ್ಯಕ್ಕೆ ದೂರವಾಗಿರುತ್ತದೆ. ಜಾತಿ, ಹೆಸರು ಬಳಸಲಾಗಿದೆ ಎಂಬ ಹೇಳಿಕೆ ಸುಳ್ಳು ಎಂದು ರಫೀ ತಿಳಿಸಿದ್ದಾರೆ.

- Advertisement - 

ತಾವು ಹೇಳಿರುವ ಹಾಗೆ ಇದ್ದರೆ ಸಾವಿರಾರು ಮಕ್ಕಳಿಗೆ ಪಾಠ ಮಾಡುವಂತಹ ಶಿಕ್ಷಕರು ದೇವರ ಸಮಾನ ಅವರಿಗೆ ಮೋಸ ಮಾಡಿದ್ದಾರೆ ಎಂದು ತಾವು ಹೇಳಿರುವ ಹೇಳಿಕೆ ಅಕ್ಷಮ್ಯ ಅಪರಾಧ. ಇಂತಹ ಹೇಳಿಕೆಗಳು ತಮ್ಮ ಘನತೆಗೆ ಧಕ್ಕೆ ತರುವಂತಹದ್ದಾಗಿವೆ. ನಾರಾಯಣಸ್ವಾಮಿಯವರೇ ತಮ್ಮ ಸಾಧನೆ ಏನು ಎಂದು ಪತ್ರಿಕೆಯ ಮೂಲಕ ತಿಳಿಸಿ ಎಂದು ಅವರು ಆಗ್ರಹ ಮಾಡಿದ್ದಾರೆ.

ಈ ಬಾರಿ ತಾವು ಪದವೀಧರ ಚುನಾವಣೆಯಲ್ಲಿ ಸ್ಪರ್ಧಿಸಿ, ಆಗ ನಾವು ನಮ್ಮ ಪಕ್ಷದಿಂದ ಒಬ್ಬ ಒಳ್ಳೆಯ ನಿಷ್ಠಾವಂತ ಅಭ್ಯರ್ಥಿ ನಿಲ್ಲಿಸಿ ನಿಮ್ಮನ್ನು ಸೋಲಿಸಲು ಬದ್ಧರಾಗಿರುತ್ತೇವೆ ಎಂದು ರಫೀ ಅವರು ಸವಾಲ್ ಹಾಕಿದ್ದಾರೆ.

 

Share This Article
error: Content is protected !!
";