ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಯು ಟ್ಯೂಬ್, ಫೇಸ್ ಬುಕ್ ನೋಡಿ ಒಂದು ಕೊಂಡರೆ ಒಂದು ಫ್ರೀ ಅಂತ ಕನ್ನಡಕವನ್ನು ಆನ್ ಲೈನ್ ನಲ್ಲಿ ಖರೀದಿಸಿದೆ. 4 ದಿನ ಆದ ಮೇಲೆ ecart ಮುಖಾಂತರ ಬಂತು. ಓಪನ್ ಮಾಡಿದಾಗ ತಿಳಿತು ಅದು ಜಾತ್ರೆಯಲ್ಲಿ ಮಾರುವಂತ ಕಚಡಾ ಕ್ವಾಲಿಟಿ ಕನ್ನಡಕ.
ನಾನು ಪಾವತಿಸಿದ್ದು 499 ಅದು 50, ರೂಪಾಯಿ ಇರ್ಬಹುದು ಮಿತ್ರರೇ ಮೋಸ ಹೋಗದಿರಿ ಯಾವುದೇ ವಸ್ತು ಕಣ್ಣಿಂದ ನೋಡದೆ ಬೆಲೆ ಕಡಿಮೆಗೆ ಸಿಗುತ್ತಿದೆ ಎಂದು ಮೋಸ ಹೋಗಬೇಡಿ. ಫೋಟೋ, ವಿಡಿಯೋದಲ್ಲಿ ನೋಡಿದರೆ ಸೂಪರ್ ಆಗಿ ಕಾಣುತ್ತದೆ. ಆದರೆ ನೈಜವಾಗಿ ಹತ್ತಿರದಿಂದ ನೋಡಿದಾಗ ಅದರ ಬಂಡವಾಳ ತಿಳಿಯಲಿದೆ.
ಹಾಗಾಗಿ ಆನ್ಲೈನಲ್ಲಿ ಯಾವುದೇ ವಸ್ತು ಖರೀದಿ ಮಾಡುವಾಗ ಎಚ್ಚರಿಕೆ ಮತ್ತು ಜಾಗೃತಿ ಇರಲಿ ಎನ್ನುವ ಕಾರಣಕ್ಕಾಗಿ ಈ ಮಾಹಿತಿ ತಿಳಿಸುತ್ತಿರುವುದಾಗಿ ಗುಜ್ಜರ್ ರಿಯಲ್ ಮೀಡಿಯಾ, ದಾವಣಗೆರೆ ಇವರು ತಿಳಿಸಿದ್ದಾರೆ.