ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕಕ್ಕೆ ಹಣದ ಬೇಡಿಕೆ ಇಟ್ಟರೆ ದೂರು ನೀಡಿ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕು ಭಾಗದ ರೈತರು ತಮ್ಮ ಕೃಷಿ ಪಂಪಸೆಟ್  ಸಕ್ರಮಗೊಳಿಸಲು ಶುಲ್ಕ ಪಾವತಿಸಿದ್ದಾರೆ. ಸರ್ಕಾರದಿಂದ ವಿದ್ಯುತ್ ಪರಿವರ್ತಿಕ ಮತ್ತು ಎಲ್.ಟಿ.ಮಾರ್ಗಗಳನ್ನು ನಿರ್ಮಿಸಿ ಮೂಲಭೂತ ಸೌಕರ್ಯ ಕಲ್ಪಿಸಿ, ಪಂಪಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಟೆಂಡರ್ ಕರೆದು ಏಜೆನ್ಸಿ ನೇಮಿಸಲಾಗಿದೆ.

ಆದರೆ ಬೆಸ್ಕಾಂ ಕೆಲ ಶಾಖಾಧಿಕಾರಿ, ಲೈನ್‍ಮನ್ ಹಾಗೂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಲು ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ರೈತರು ಹಣ ನೀಡಬಾರದು.

- Advertisement - 

ಒಂದು ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಿ ಹಣಕ್ಕೆ ಬೇಡಿಕೆ ಇಟ್ಟರೆ, ಈ ಬಗ್ಗೆ  ಮೊಬೈಲ್‍ನಲ್ಲಿ ಧ್ವನಿ ಅಥವಾ ವೀಡಿಯೋ ರೆಕಾರ್ಡಿಂಗ್ ಮಾಡಿ, ಚಿತ್ರದುರ್ಗ ವಲಯದ ಮುಖ್ಯ ಇಂಜಿನಿಯರ್ ಕಚೇರಿಗೆ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

 

- Advertisement - 

 

 

Share This Article
error: Content is protected !!
";