ಗೌತಮ ಬುದ್ದರ ಆದರ್ಶದಲ್ಲಿ ಸಾಗಿದರೆ ಸಾರ್ಥಕತೆ ಕಾಣಲು ಸಾಧ್ಯ: ಬಿಪಿಟಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವೈಭೋಗದ ಸುಖಜೀವನವನ್ನು ತ್ಯಜಿಸಿ ಮಾನವರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್‌ಶ್ರೇಷ್ಠರದಲ್ಲಿ ಗೌತಮಬುದ್ದ ಒಬ್ಬರಾಗಿದ್ದಾರೆ. ಗೌತಮಬುದ್ದ ಜ್ಞಾನದ ಸಂಕೇತವಾಗಿದ್ಧಾರೆ.

ಪ್ರತಿಯೊಬ್ಬ ಬದುಕನ್ನು ಪರಿವರ್ತನೆ ಹಾದಿಯತ್ತ ನಡೆಯುವ ಎಲ್ಲಾ ರೀತಿಯ ಸಾಧ್ಯತೆಗಳನ್ನು ನಾವು ಗೌತಮಬುದ್ದರ ವಿಚಾರಧಾರೆಗಳಿಂದ ತಿಳಿಯಬಹುದಾಗಿದೆ ಎಂದು ಅಂಬೇಡ್ಕರ್ ವಿದ್ಯಾರ್ಥಿಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.

ಅವರು, ಭಾನುವಾರ ನಗರದ ಬಿಎಸ್‌ಪಿ ಕಚೇರಿಯಲ್ಲಿ ಬೌದ್ದಧರ್ಮದ ಪ್ರಸ್ತುತತೆ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಪಾರವಾದ ಭಕ್ತಿ, ಶ್ರದ್ದೆಯನ್ನಿಟ್ಟು ದೇವರನ್ನು ಪೂಜಿಸಿದರೆ ನಮ್ಮೆಲ್ಲಾ ಸಮಸ್ಯೆಗಳು ಕರಗಿ ನೆಮ್ಮದಿ ಮೂಡುತ್ತದೆ.

ಅದೇ ರೀತಿ ಬುದ್ದರ ವಿಚಾರಧಾರೆಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡರೆ ನಾವೆಲ್ಲರೂ ಸಾರ್ಥಕತೆ ಬಾಳನ್ನು ಬಾಳಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಗೌತಮಬುದ್ದರ ಆದರ್ಶಗಳನ್ನು ಪರಿಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಭೀಮನಕೆರೆಶಿವಮೂರ್ತಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಚ್. ಪ್ರಕಾಶ್, ಬಂಗಾರಪ್ಪ, ಎಚ್.ತಿಪ್ಪೇಸ್ವಾಮಿ, ರಾಜಣ್ಣ, ಮಂಜು, ರೇಣುಕಮ್ಮ, ತಿಮ್ಮಕ್ಕ, ಪುಟ್ಟಮ್ಮ, ಪ್ರಜ್ವಲ್ ಮುಂತಾದವರು ಇದ್ದರು. 

 

 

- Advertisement -  - Advertisement -  - Advertisement - 
Share This Article
error: Content is protected !!
";