ನೆಮ್ಮದಿ ಸಿಗಬೇಕಾದರೆ ಧ್ಯಾನ, ದೇವರ ಪೂಜೆಯಲ್ಲಿ ತೊಡಗಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಮಗೆ ನೆಮ್ಮದಿ ಸಿಗಬೇಕಾದರೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಮೂಲಕ ದೇವಾಲಯದಲ್ಲಿ ಕುಳಿತು ಧ್ಯಾನ ಮಾಡಿಕೊಂಡು ಹೋದರೆ ಎಲ್ಲಿ
  ಇಲ್ಲದ ನೆಮ್ಮದಿ ಸಿಗುತ್ತದೆ ಎಂದು ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ ಭಕ್ತರಿಗೆ ಕಿವಿಮಾತು ತಿಳಿಸಿದರು.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮೂರನೇ ವಾರ್ಷಿಕೋತ್ಸವದಲ್ಲಿ ಬೆಳಗ್ಗೆಯಿಂದಲೇ ಅಮ್ಮನಿಗೆ ಚಂಡಿಕಾ ಹೋಮ ಅಲಂಕಾರ ಪೂಜೆಗಳು ನೆರವೇರಿಸಿ, ಮಹಾಮಂಗಳಾರತಿಯೊಂದಿಗೆ ಭಕ್ತರಿಗೆ ದರ್ಶನ ಕಲ್ಪಿಸಲಾಯಿತು. 

ಇನ್ನು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ದರ್ಶನ ಪಡೆದರು. ಇನ್ನು ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ ಅಮ್ಮನನವರಿಗೆ ಪೂಜೆ ಸಲ್ಲಿಸಿ ಮಾತನಾಡಿ ಗ್ರಾಮಗಳಲ್ಲಿ ದೇವಸ್ಥಾನಗಳಿರುವುದು ಜನರ ನೆಮ್ಮದಿಗಾಗಿ, ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿರುವ ಅರಿಶಡವರ್ಗಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ.

ದೇವರ ದರ್ಶನ ನಿಮ್ಮ ಮನಸ್ಸಿಗೆ ಶಾಂತಿ ದೊರಕುತ್ತದೆ, ನಿಮ್ಮ ಮಾನಸಿಕ ಸಂಕಷ್ಟಗಳನ್ನು ದೂರ ಪಡಿಸಲು ದೇವಾಲಯಗಳು ಸಹಕಾರಿಯಾಗುತ್ತವೆ, ನಿಮ್ಮ ಮನೆಯಲ್ಲಿ ಎದುರಾಗುವ ಸಂಕಷ್ಟಗಳನ್ನು ಹೋಗಲಾಡಿಸಲು ದೇವರ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಎಲ್ಲಾ ಕಷ್ಟಗಳು ದೂರವಾಗುತ್ತದೆ, ನಾವು ಯಾವುದೇ ಕೆಲಸ ಮಾಡಿದರೆ ಮೊದಲು ದೇವರಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿ, ಆಮೇಲೆ ಕೆಲಸವನ್ನು ಪ್ರಾರಂಭ ಮಾಡುತ್ತೇವೆ ಅದೇ ರೀತಿಯಿಗಿ ನಮ್ಮ ಹಿರಿಯರು ಸಂಸ್ಕಾರವನ್ನು ನಮಗೆ ನೀಡಿ ಹೋಗಿದ್ದಾರೆ ಅದೇ ರೀತಿ ಪಾಲನೆ ಮಾಡಿ ಎಂದು ಆಶೀರ್ವಾದ ಮಾಡಿದರು.

ಕಾರ್ಯಕ್ರಮದಲ್ಲಿ ತಪಸಿಹಳ್ಳಿ ಪುಷಾಂಡಜ ಮಹರ್ಷಿ ಶ್ರೀ ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಚೌಡೇಶ್ವರಿ ಟ್ರಸ್ಟ್ ಅಧ್ಯಕ್ಷ ಅಪ್ಪಯ್ಯಣ್ಣ ನಾಗರಾಜ್, ಉಪಾಧ್ಯಕ್ಷ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಚ್. ನಾರಾಯಣಪ್ಪ, ಖಜಾಂಚಿ ಸುರೇಶ್ ಬಾಬು ಹಾಗೂ ಟ್ರಸ್ಟ್ ನ ನಿರ್ದೇಶಕರು ದೇವಾಲಯದ ಕುಲಬಾಂಧವರು ಹಾಜರಿದ್ದರು.

Share This Article
error: Content is protected !!
";