ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಚಿನ್ನ ಕಳ್ಳಸಾಗಾಣಿಕೆಯ ಆರೋಪಿಯ ಖಾತೆಗೆ ಹಣ ವರ್ಗಾಯಿಸಿರುವ ಪ್ರಕರಣದಲ್ಲಿ ಸಿಲುಕಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರ ಪಾತ್ರ ಇರುವುದನ್ನು ಸ್ವತಃ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ರನ್ಯಾ ರಾವ್‌ಗೆ ಗೃಹ ಸಚಿವರು ಹಣ ನೀಡಿರುವುದು ಇಡಿ ತನಿಖೆಯ ಮೂಲಕ ಬಹಿರಂಗವಾದ ಬೆನ್ನಲ್ಲೇ ಗೃಹಸಚಿವರ ಪಾತ್ರವನ್ನು ಡಿಸಿಎಂ ಸ್ಪಸ್ಟ ಪಡಿಸಿದ್ದಾರೆ. ಈ ವಿಚಾರವು ಈಗ ಸರ್ಕಾರದೊಳಗೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಗೃಹ ಸಚಿವರ ವಿರುದ್ಧವೇ ತನಿಖಾ ಸಂಸ್ಥೆಗಳ ತನಿಖೆಗೆ ಪೂರಕವಾಗಿ ಡಿಸಿಎಂ ಸಾಕ್ಷ್ಯ ನುಡಿದಿರುವುದಕ್ಕೆ ಪರಮೇಶ್ವರ್ ಸಹಿತ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲು ಕೂಡಾ ನಿರ್ಧರಿಸಿದ್ದಾರೆ. ಅಕ್ರಮ ನಡೆಸುವುದು ಸರಿ, ಅಕ್ರಮದ ಸಾಕ್ಷಿ ನೀಡುವುದು ತಪ್ಪು ಎನ್ನುವ ವಾತಾವರಣ ಕಾಂಗ್ರೆಸ್ ಪಕ್ಷದೊಳಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಟೀಕಿಸಿದೆ.