ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವೀರದಿಮ್ಮನಹಳ್ಳಿ ಕ್ರಾಸ್‌ಬಳಿ ವ್ಯಕ್ತಿಯೊಬ್ಬ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಮಾಲುಸಹಿತ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಠಾಣಾ ಇನ್ಸ್‌ಪೆಕ್ಟರ್ ಕೆ.ಕುಮಾರ್ ಮಾಹಿತಿ ನೀಡಿ, ಸಾರ್ವಜನಿಕರ ಮಾಹಿತಿ ಮೇರೆಗೆ ಪಿಎಸ್‌ಐ-೧ ಈರೇಶ್ ಇವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಸ್ವಿಪ್ಟ್‌ಡಿಜೇನರ್ ಕಾರ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ಎಲ್ಲಿಂದಲೋ ತಂದು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ
ಜಿಲ್ಲಾ ರಕ್ಷಣಾಧಿಕಾರಿಗಳ ಸೂಚನೆಯಂತೆ ಹೊಳಲ್ಕೆರೆ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ರೇಣುಕಾರಾಜ್(೩೩), ಗುಂಡಿಮಡುಗು ಗೊಲ್ಲರಹಟ್ಟಿಯ ಬುವಣ್ಣ ಇವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರ ಬಳಿ ಸುಮಾರು ೬೦ ಗ್ರಾಮ ತೂಕದ ಬೀಜ ಮತ್ತು ಕಡ್ಡಿ ಮಿಶ್ರಿತ ಸುಮಾರು ಮೂರುಸಾವಿರ ಮೌಲ್ಯದ ಗಾಂಜಾವಿದ್ದು,
ಅದನ್ನು ಪಡೆದು ಪ್ರಕರಣ ದಾಖಲಿಸಲಾಗಿದೆ. ಎಎಸ್‌ಐ ರಾಘವರೆಡ್ಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ. ಘಟನೆಯಲ್ಲಿ ಬಾಗಿಯಾದ ಟಿ.ಗಂಗಣ್ಣ, ಆರ್.ಎಸ್.ಸುಹಾಸ್ ವಿರುದ್ದವೂ ಪ್ರಕರಣ ದಾಖಲು ಮಾಡಲಾಗಿರುತ್ತದೆ.