ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿಸಿದ್ಧರಾಮೇಶ್ವರ ಸ್ವಾಮೀಜಿರವರ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ಭೇಟಿ ಮಾಡಿ ನ್ಯಾ.ನಾಗಮೋಹನದಾಸರವರ ಆಯೋಗದ ಒಳ ಮೀಸಲಾತಿ ಜನಗಣತಿ ಲೋಪ ಸರಿಪಡಿಸಿ ಜನಸಂಖ್ಯಾವಾರು ಪ್ರತ್ಯೇಕ ಮೀಸಲಾತಿ ನೀಡುವಂತೆ ಭೋವಿ ಸ್ವಾಮೀಜಿಗಳು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸಚಿವ ಸಪುಂಟದಲ್ಲಿ ತಮ್ಮ ಮನವಿಯನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.
ನಿಯೋಗದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ವಿ. ಹನುಮಂತಪ್ಪ, ರವಿ ಪೂಜಾರಿ, ಜಯಶಂಕರ, ಮುರಳಿಧರ ಬಂಡೆ, ಮಂಜುಳ, ಗೀತಾ, ತಿಪ್ಪಣ್ಣ ಒಡೆಯರಾಜು, ಕೃಷ್ಣಪ್ಪ ಹಾಗೂ ಇನ್ನಿತರರಿದ್ದರು.

