ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರರಿಗೆ ಕೊಲೆ ಬೆದರಿಕೆ ಹಾಕಲು ಹಾಗೂ ಬಿಜೆಪಿ ನಾಯಕರನ್ನು ಕೊಲ್ಲಲು ರಾಜು ಕಪನೂರಿಗೆ ಸುಪಾರಿ ಕೊಟ್ಟಿರುವ ಟ್ರೋಲ್ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸರಣಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಆತ್ಮಹತ್ಯೆ ಭಾಗ್ಯ ಜಾರಿಗೊಳಿಸಿದೆ. ಬೀದರ್‌ಮೂಲದ ಗುತ್ತಿಗೆದಾರ ಸಚಿನ್‌ಆತ್ಮಹತ್ಯೆ ಪ್ರಕರಣವು ದೇಶದಲ್ಲೇ ಸುದ್ದಿ ಮಾಡುತ್ತಿದೆ ಎಂದು ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ.
ನೈತಿಕತೆಯ ಬಗ್ಗೆ ಮಾರುದ್ದ ಭಾಷಣ ಬಿಗಿಯುವ ಕೊಲೆಗಡುಕ ಪ್ರಿಯಾಂಕ್ ಖರ್ಗೆ, ತಮ್ಮ ಮೇಲೆ ಕೊಲೆ ಆರೋಪ ಬಂದರೂ ಇನ್ನೂ ಕೂಡಾ ರಾಜೀನಾಮೆ ನೀಡದಿರುವುದು ಏಕೆ..?? ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಅವರು ಆಗ್ರಹ ಮಾಡಿದ್ದಾರೆ.
ಕೊಲೆಗಡುಕರ ಸರ್ಕಾರ ಅದುವೇ ಕರ್ನಾಟಕ ಕಾಂಗ್ರೆಸ್ ಸರ್ಕಾರ!! ರೈತರ ಆತ್ಮಹತ್ಯೆ, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಈಗ ಗುತ್ತಿಗೆದಾರರ ಆತ್ಮಹತ್ಯೆ!!!
ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ನೇರ ಕಾರಣ ಸುಪಾರಿ ಕಿಲ್ಲರ್ ಗಳನ್ನು ಸಾಕಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು!!
ಸಿಎಂ ಸಿದ್ದರಾಮಯ್ಯ ಅವರೆ, ಕೊಲೆಗಡುಕ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಿ. ಗುತ್ತಿಗೆದಾರ ಸಚಿನ್ ಅವರ ಸಾವಿಗೆ ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ ನಮ್ಮ ಹೋರಾಟ ನಿಶ್ಚಿತ!! ಎಂದು ಅವರು ಎಚ್ಚರಿಸಿದ್ದಾರೆ.