ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ೨೦೨೨-೨೩ ನೇ ಸಾಲಿನಲ್ಲಿ ವಿಪರೀತ ಮಳೆ ಸುರಿದು ಪ್ರಕೃತಿ ವಿಕೋಪವಾಗಿದ್ದು ವಾಡಿಕೆ ಮಳೆಗಿಂತ ಶೇ. ೮೦ರಷ್ಟು ಹೆಚ್ಚಾಗಿದ್ದು, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಅನೇಕ ರೋಗಗಳು ಹೆಚ್ಚಾಗಿವೆ ಮತ್ತು ೨೦೨೩ರಲ್ಲಿ ಉಷ್ಣಾಂಶ ಕೂಡ ೪೦ ಡಿಗ್ರಿ ಆಗಿದೆ.
ಆದ್ದರಿಂದ ಬೆಳೆ ವಿಮೆ ಕಟ್ಟಿರುವ ಎಲ್ಲ ರೈತರಿಗೂ ಕೂಡಲೇ ಬೆಳೆ ವಿಮೆ ಪಾವತಿಸಬೇಕು ಮತ್ತು ಹೊಸದುರ್ಗ ತಾಲೂಕಿನಲ್ಲಿ ತೆಂಗು ಅಭಿವೃದ್ಧಿ ಯೋಜನೆಯಲ್ಲಿ ವಿತರಿಸುತ್ತಿರುವ ಗೊಬ್ಬರ ಹಾಗೂ ಕೀಟನಾಶಕ ಕಳಪೆ ಮತ್ತು ರೈತರಿಗೆ ವಿತರಿಸದೆ ಹಣ ಪಡೆದಿರುತ್ತಾರೆ ಮತ್ತು ಎಲ್ಲಾ ತಾಲೂಕುಗಳನ್ನು ಗೊಬ್ಬರ ಬೀಜ ಹಾಗೂ ಪರಿಕರಗಳಲ್ಲಿ ಬಹಳಷ್ಟು ಕಳಪೆ ಹಾಗೂ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು ಮತ್ತು ನಕಲಿ ದಾಖಲೆ ಸೃಷ್ಟಿಸಿ ಬಿಲ್ ಮಾಡಲಾಗುತ್ತದೆ.
ಆದ್ದರಿಂದ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗಾಗಿ ಅಡಿಕೆ ಬೆಳೆಗೆ ವಿಮೆ ಪಾವತಿಸದೇ ಇದ್ದರೇ ತಮ್ಮ ಇಲಾಖೆ ಮುಂಭಾಗದಲ್ಲಿ ೦೬ ತಾಲ್ಲೂಕಿನ ರೈತರೊಂದಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ರವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರಂಗಸ್ವಾಮಿ, ಹೊಳಲ್ಕೆರೆ ರಂಗಣ್ಣ, ಜಯಣ್ಣ, ವೀರಭದ್ರಪ್ಪ, ಹಿರಿಯೂರು ಸಿದ್ರಾಮಣ್ಣ, ಸಣ್ಣ ತಿಮ್ಮಣ್ಣ, ಗಿರೀಶ್, ಚಳ್ಳಕೆರೆ ಶ್ರೀಕಂಠ ಮೂರ್ತಿ, ತಿಪ್ಪೇಸ್ವಾಮಿ, ಚನ್ನಕೇಶವ, ಹೊಸದುರ್ಗ ರಾಮಣ್ಣ, ಪ್ರಸನ್ನ, ಈರಣ್ಣ, ರಾಮಣ್ಣ, ಮೀಸೆ ಗೌಡ ಹಾಗೂ ಇನ್ನಿತರರು ಭಾಗವಹಿಸಿದ್ದರು.

