ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀರಿನ ಮಹತ್ವ
ನೀರು ನಮ್ಮ ಜೀವನದ ಅಮೂಲ್ಯ ಸಂಪತ್ತಾಗಿದೆ. ನೀರಿಲ್ಲದೆ ಬದುಕು ಸಾಧ್ಯವಿಲ್ಲ. ಮನುಷ್ಯರು ಮಾತ್ರವಲ್ಲದೆ ಎಲ್ಲಾ ಜೀವಿಗಳು ನೀರಿನ ಮೇಲೆ ಅವಲಂಬಿತವಾಗಿವೆ. ನೀರು ದಾಹವನ್ನು ತಣಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಅತ್ಯಗತ್ಯ.
ನೀರು ನಮ್ಮ ದೈನಂದಿನ ಜೀವನದಲ್ಲಿ ಅನೇಕ ರೀತಿಯಲ್ಲಿ ಉಪಯೋಗವಾಗುತ್ತದೆ. ಅಡುಗೆ ಮಾಡಲು, ಕುಡಿಯಲು, ಸ್ನಾನಕ್ಕೆ, ಸ್ವಚ್ಛತೆಗೆ ಹಾಗೂ ಇತರ ಕೆಲಸಗಳಿಗೆ ನೀರು ಬೇಕಾಗುತ್ತದೆ. ನೀರಿಲ್ಲದೆ ಯಾವುದೇ ಅಡುಗೆ ಪೂರ್ಣವಾಗುವುದಿಲ್ಲ. ನೀರು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯವಾಗಿದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು, ಪೋಷಕಾಂಶಗಳನ್ನು ಅಂಗಾಂಗಗಳಿಗೆ ಸಾಗಿಸಲು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ನೀರು ಸಹಾಯಕವಾಗಿದೆ.
ಸಸ್ಯಗಳು, ಮರಗಳು, ಗಿಡಗಳು ಮತ್ತು ಹೂವುಗಳು ಬೆಳೆಯಲು ನೀರು ಬಹಳ ಮುಖ್ಯ. ನೀರು ಇರುವುದರಿಂದ ಪ್ರಕೃತಿ ಹಸಿರಾಗಿದ್ದು ಸುಂದರವಾಗಿರುತ್ತದೆ. ನೀರಿಲ್ಲದೆ ಪರಿಸರ ಬತ್ತಿಹೋಗುತ್ತದೆ ಮತ್ತು ಜೀವಿಗಳು ಸಂಕಷ್ಟ ಅನುಭವಿಸುತ್ತವೆ.
ಆದ್ದರಿಂದ ನೀರು ನಮ್ಮ ಬದುಕಿನ ಮೂಲವಾಗಿದೆ. ನಾವು ನೀರನ್ನು ವ್ಯರ್ಥ ಮಾಡದೆ ಸಂರಕ್ಷಿಸಬೇಕು. ನೀರನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಲೇಖನ:ಛಾಯ, 8ನೇ ತರಗತಿ, ಒನ್ ವರ್ಲ್ಡ್ ಇಂಟರ್‌ನ್ಯಾಷನಲ್ ಸ್ಕೂಲ್, ಸರ್ಜಾಪುರ, ಬೆಂಗಳೂರು.

