ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅನ್ನದಾತರಿಗೆ ಚೊಂಬೇ ಗತಿ..! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ರೈತರಿಗೆ ಗೊಬ್ಬರವಿಲ್ಲ, ಕಳಪೆ ಬಿತ್ತನೆ ಬೀಜ ವಿತರಣೆ, ಹಾಲಿನ ಬಾಕಿ ಪ್ರೋತ್ಸಾಹ ಧನವಿಲ್ಲ, ಸಮರ್ಪಕ ವಿದ್ಯುತ್ ಇಲ್ಲ, ರೈತರ ಮಕ್ಕಳಿಗೆ ವಿದ್ಯಾನಿಧಿ ಇಲ್ಲ, ಕೃಷಿ ಸಮ್ಮಾನ್ ರಾಜ್ಯದ ಪಾಲು ಇಲ್ಲ, ರೈತರಿಗೆ ನೀಡುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ದುಬಾರಿ ಎಂದು ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯದೆಲ್ಲೆಡೆ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದರೇ ಉಪಯೋಗಕ್ಕೆ ಬಾರದ ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಅವರು ನಿದ್ದೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ಅಸಮರ್ಥ ಸಚಿವರನ್ನು ಮೊದಲು ಮನೆಗೆ ಕಳುಹಿಸಿ, ಅನ್ನದಾತರಿಗೆ ಸಮರ್ಪಕವಾಗಿ ಗೊಬ್ಬರ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.

