ಚಂದ್ರವಳ್ಳಿ ನ್ಯೂಸ್, ಕುಣಿಗಲ್:
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಜಿಲ್ಲೆ ತುಮಕೂರಿನ ಕುಣಿಗಲ್ ಸಮೀಪದ ರಂಗಸ್ವಾಮಿ ಬೆಟ್ಟದ ಪ್ರವೇಶ ದ್ವಾರದಲ್ಲಿದ್ದ ವಿಷ್ಣು ದೇವರ ವಿಗ್ರಹ ಭಗ್ನ ಮಾಡಲಾಗಿದೆ.
ದೇವರ ವಿಗ್ರಹದ ಸುತ್ತಲೂ ತಂತಿ ಬೇಲಿ ಹಾಕಿದ್ದರೂ ಕಿಡಿಗೇಡಿಯೊಬ್ಬ ವಿಷ್ಣು ವಿಗ್ರಹವನ್ನು ಧ್ವಂಸ ಮಾಡಿದ್ದಾನೆ.
ಧ್ವಂಸ ಮಾಡುತ್ತಿರುವ ಘಟನೆಯ ಸನ್ನಿವೇಶದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ದೇವತೆಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದ್ದು ದೇವಾಲಯದ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿದ್ದಾರೆ. ಸಿಸಿಟಿವಿ ಕ್ಯಾಮೆರ ದೃಶ್ಯಗಳ ಆಧಾರಿಸಿ ನೀಡಿದ ದೂರಿನ ಮೇರೆಗೆ ಅಡೋನಹಳ್ಳಿ ಗ್ರಾಮದ ಶಂಕಿತ ವ್ಯಕ್ತಿ ವಿರುದ್ಧ ದೂರು ನೀಡಲಾಗಿದೆ.