ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್ ಮಂಜುನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ ಗುತ್ತಿಗೆದಾರರಿಗೆ ಈ ಸರ್ಕಾರದಿಂದಲೂ ಪೇಮೆಂಟ್ಗಳು ಆಗುತ್ತಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ.
ಗುತ್ತಿಗೆದಾರರು ಮತ್ತು ಇಲಾಖೆಗಳ ನಡುವೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ. ನಮ್ಮ ಚಿತ್ರದುರ್ಗದಲ್ಲಿ ಮಾತಾಡಿರುವ ಅವರು ಪಾರದರ್ಶಕತೆ ಕಾಯ್ದೆ ಪ್ರಕಾರ ಜೇಷ್ಠತೆ ಆಧಾರದ ಮೇಲೆ ಗುತ್ತಿಗೆದಾರರ ಬಾಕಿ ಬಿಲ್ಗಳ ಪಾವತಿ ಆಗಬೇಕು,
ಆದರೆ ಸರ್ಕಾರ ಆ ರೀತಿ ಮಾಡುತ್ತಿಲ್ಲ, ರಾಜ್ಯದಲ್ಲಿ ಒಟ್ಟು ಒಂದೂವರೆ ಲಕ್ಷ ಜನ ಗುತ್ತಿಗೆದಾರರಿದ್ದಾರೆ ಮತ್ತು ಅವರಲ್ಲಿ ಶೇಕಡ 60ರಷ್ಟು ಜನ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರು. ಇವರಿಗೆ ಪೇಮೆಂಟ್ಗಳೇ ಆಗುತ್ತಿಲ್ಲ. ವಿಶೇಷ ಎಲ್ಒಸಿ ಹೆಸರಿನಲ್ಲಿ ಕೇವಲ ಬಲಾಢ್ಯ ಗುತ್ತಿಗೆದಾರರಿಗೆ ಮಾತ್ರ ಪೇಮೆಂಟ್ ಆಗುತ್ತಿದೆ, ಮಿಕ್ಕವರು ಹೇಗೆ ಬದುಕಬೇಕು? ಎಂದು ಮಂಜುನಾಥ್ ಪ್ರಶ್ನಿಸುತ್ತಾರೆ.
ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳಲ್ಲೂ ಸಾಕಷ್ಟು ಬಾಕಿ ಇದೆ. ಇಲ್ಲೂ ಸಂಬಂಧಿ ಮಧ್ಯವರ್ತಿಗಳ ಹಾವಳಿ ಶುರುವಾಗಿದೆ ಎಂದು ಆರ್.ಮಂಜುನಾಥ್ ಆರೋಪಿಸಿದ್ದಾರೆ.