ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಂಚಿಟಿಗರ ಸಾರ್ವಜನಿಕ ಸೇವಾ ಟ್ರಸ್ಟ್ ವತಿಯಿಂದ ಶ್ರೀ ವಾಗ್ದೇವಿ ವಿದ್ಯಾರ್ಥಿನಿ ನಿಲಯದಲ್ಲಿ ಹೊಸದಾಗಿ ನಿರ್ಮಿಸಲಾದ ಮೂರನೇ ಮಹಡಿಯ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ತಿಂಗಳ 31ರಂದು ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿನ ಸುಂಕದಕಟ್ಟೆಯ ಕೆಎಸ್ಎಸ್ ಟಿ ಹಾಸ್ಟೆಲ್ ನಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು, ನಿವೃತ್ತ ವೈದ್ಯಾಧಿಕಾರಿ ಡಾ. ಎನ್. ಎಚ್. ಹಾಲಪ್ಪ, ಗೌರವ ಅತಿಥಿಗಳಾಗಿ ಕೃಷಿ ಆಯುಕ್ತಾಲಯದ ಜಂಟಿ ನಿರ್ದೇಶಕ(ಆಡಳಿತ) ಚಂದ್ರಶೇಖರಯ್ಯ ಎಚ್.ಜಿ, ಆರೋಗ್ಯ ಸೌಧದ ಮುಖ್ಯ ಆಡಳಿತಾಧಿಕಾರಿ ಜಿ. ಎಚ್. ನಾಗಹನುಮಯ್ಯ ಪಾಲ್ಗೊಳ್ಳಲಿದ್ದಾರೆ.
ಬಿಡಿಎ ಭೂಸ್ವಾಧೀನ ಇಲಾಖೆ ಉಪ ಆಯುಕ್ತ ಕೆ. ಎಚ್. ಜಗದೀಶ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕೋಪಯೋಗಿ ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ಮೇಜರ್ ರಮೇಶ್ ಸಿ. ಆರ್, ಯುಎಸ್ಎ ಸ್ಥಾಪಕ ಬಿ. ಆರ್. ರಾಜೀವ್ ರಮೇಶ್,
ಕೆಎಸ್ಎಸ್ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಬಾಲಕೃಷ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ವಿದ್ಯಾರ್ಥಿಗಳು ಕುಂಚಿಟಿಗರ ಸಾರ್ವಜನಿಕ ಸೇವಾ ಟ್ರಸ್ಟ್ ಭಾಗವಹಿಸಲಿದ್ದಾರೆಂದು ಜ್ಯೋತಿ ಬಾಲಕೃಷ್ಣ ತಿಳಿಸಿದ್ದಾರೆ.

