ಜಿಲ್ಲಾಸ್ಪತ್ರೆ: ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 393 ಆಶಾ ಕಿರಣ ದೃಷ್ಟಿ ಕೇಂದ್ರಗಳನ್ನು ಏಕಕಾಲಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡಿಜಿಟಲ್ ವ್ಯವಸ್ಥೆಯ ಮೂಲಕ ಉದ್ಘಾಟಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಅವರು ಜಿಲ್ಲಾ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು.

- Advertisement - 

  ನಂತರ ಮಾತನಾಡಿದ ಡಿಹೆಚ್‍ಒ ಡಾ.ಜಿ.ಪಿ.ರೇಣುಪ್ರಸಾದ್, ಆಶಾ ಕಿರಣ ದೃಷ್ಟಿ ಕೇಂದ್ರ ಸ್ಥಾಪನೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮೆಚ್ಚುಗೆ ವ್ಯಕ್ತ ಪಡಿಸಿರುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ತೆ ಮತ್ತು ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು ಜಿಲ್ಲೆಯಾದ್ಯಂತ 17 ಕಡೆ ಇಂದಿನಿಂದ ಸೇವೆ ಒದಗಿಸಲಾಗುತ್ತದೆ ಎಂದರು. 

- Advertisement - 

ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ..ನಾಗರಜ್ ಮಾತನಾಡಿ, ಈ ಹಿಂದೆ ಆಶಾ ಕಿರಣ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆ ಭೇಟಿ ಮಾಡಿ ಆಶಾ ಕಾರ್ಯಕರ್ತೆಯರಿಂದ ದೃಷ್ಟಿ ದೋಷ ಪರೀಕ್ಷೆ ನಡೆಸಿ ಎರಡನೇ ಹಂತದಲ್ಲಿ ಈಗಾಗಲೇ ಗುರುತಿಸಿದ ದೃಷ್ಟಿ ದೋಷದ ಫಲಾನುಭವಿಗಳನ್ನು ಸಹಾಯಕ ನೇತ್ರಾಧಿಕಾರಿಗಳ ಮೂಲಕ ಮತ್ತು ಕಣ್ಣಿನ ತಜ್ಞರ ಮೂಲಕ ತಪಾಸಣೆ ನಡೆಸಿ ದತ್ತಾಂಶವನ್ನು ಗಣಕೀಕೃತಗೊಳಿಸಿ ಶಾಲಾ ಮಕ್ಕಳಿಗೆ ಇತರೆ ಸಾರ್ವಜನಿಕರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕನ್ನಡಕಗಳನ್ನು ವಿತರಿಸುವ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ.

ಯೋಜನೆಯ 3 ಹಂತದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಣ್ಣಿನ ದೋಷ ನಿವಾರಣೆಗಾಗಿ ಆಶಾ ಕಿರಣ ದೃಷ್ಟಿಕೇಂದ್ರಗಳ ಸ್ಥಾಪನೆಯಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 32 ಜನರಿಗೆ ದೃಷ್ಟಿ ದೋಷ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್ ಪ್ರಕಾಶ್, ವೈದ್ಯರಾದ ಡಾ.ಶಿಲ್ಪಾ, ಡಾ.ಪ್ರದೀಪ್ ಸಹಾಯಕ ನೇತ್ರಾಧಿಕಾರಿ ಕೆ.ಸಿ.ರಾಮು ಉಪಸ್ಥಿತರಿದ್ದರು.

 

 

 

Share This Article
error: Content is protected !!
";