ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ನಗರದ ದರ್ಗಾಪುರದಲ್ಲಿರುವ ಶ್ರೀ ರಥಸಪ್ತಮಿ ಶನೈಶ್ವರ ಸ್ವಾಮಿ ದೇವಾಲಯ ಹಾಗೂ ತಿಮ್ಮಪ್ಪ ಸ್ವಾಮಿಯವರ ಮಠದ 26ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಜೇಷ್ಠಾದೇವಿ ಸಮೇತ ಶ್ರೀ ಶನೈಶ್ವರ ಪ್ರಸಾದ ನಿಲಯದ ಉದ್ಘಾಟನಾ ಕಾರ್ಯಕ್ರಮ ಜ.24 ಮತ್ತು 25ರಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ.24ರಂದು ಬೆಳಿಗ್ಗೆ 9 ಗಂಟೆಯಿಂದ ಕಳಸಾರಾಧನೆ, ಗಣ ಹೋಮ, ರುದ್ರ ಹೋಮ, ಶನಿ ಶಾಂತಿ ಹೋಮಗಳು ನಡೆಯಲಿವೆ. ಸಂಜೆ 4 ಗಂಟೆಗೆ ಪಂಚಮುಖಿ ಹನುಮ ಭಜನಾ ತಂಡದಿಂದ ಲಲಿತಾ ಸಹಸ್ರನಾಮ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನಾ ಕಾರ್ಯಕ್ರಮಗಳು ಜರುಗಲಿವೆ.
ಜ.25ರಂದು ಪ್ರಸಾದ ನಿಲಯ ಉದ್ಘಾಟನೆ ಅಂಗವಾಗಿ ಬೆಳಿಗ್ಗೆ 9 ಗಂಟೆಯಿಂದ ಅಭಿಷೇಕ, ಕವಚಧಾರಣೆ, ವಿಶೇಷ ಅಲಂಕಾರ ನಡೆಯಲಿದೆ. ಬಳಿಕ ಕುಣಿಗಲ್ ತಿಮ್ಮಯ್ಯ ದಾಸರಿಂದ ಹರಿಕಥೆ, ಎಚ್.ಗಂಗಾಧರಯ್ಯ ಅವರಿಂದ ಪ್ರವಚನ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ದೇವಾಲಯದ ಆಡಳಿತ ಮಂಡಲಿ ಮನವಿ ಮಾಡಿದ್ದಾರೆ.

