ಜೋಡಿಚಿಕ್ಕೇನಹಳ್ಳಿಯ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಉದ್ಘಾಟನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜುಲೈ-24ರಂದು ಗುರುವಾರ, ಶುಕ್ರವಾರ ಮತ್ತು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಜೋಡಿಚಿಕ್ಕೇನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ಜು.24 ರ ಗುರುವಾರ ಸಂಜೆ ಗಂಗಾ ಪೂಜೆ, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಗ್ರಹ ಮೆರವಣೆಗೆ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಜು.25ರ ಶುಕ್ರವಾರ ಪ್ರಥಮ ಶ್ರಾವಣಮಾಸಕ್ಕೆ ರಾತ್ರಿ 12-30 ರಿಂದ ವಾಸ್ತುಪೂಜೆ, ನವಗ್ರಹ ಪೂಜೆ, ಗಣಹೋಮ, ನಂತರ ಬೆಳಗಿನ ಜಾವ,

- Advertisement - 

ಬ್ರಾಹ್ಮ ಮುಹೂರ್ತದಲ್ಲಿ ಬೆಳಿಗ್ಗೆ 9 ಗಂಟೆಗೆ ಶ್ರೀ ವೀರಾಂಜನೇಯಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ನಂತರ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ದೃಷ್ಟಿಪೂಜೆ, ಬಲಿ ಅನ್ನಹಾಕುವುದು, ದೇವಸ್ಥಾನ ದಿಕ್ಕುಕಟ್ಟುವುದು, ಪೂರ್ಣಾಹುತಿ, ಪಂಚಾಮೃತ ಅಭೀಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಸೇರಿದಂತೆ ಬೆಳಗ್ಗೆ 10-30 ರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಗ್ರಾಮಸ್ಥರು ಮತ್ತು ಭಕ್ತಾಧಿಗಳು ಆಗಮಿಸಿ ತನು ಮನ ಧನಸಹಾಯದೊಂದಿಗೆ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

- Advertisement - 

ಜು.26ರ ಶನಿವಾರ ಬೆಳಿಗ್ಗೆ 6-30ರಿಂದ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ಪೂಜಾ ಕಾರ್ಯಕ್ರಮ, ತೀರ್ಥ ಪ್ರಸಾದ ಕಾರ್ಯಕ್ರಮ ಇರುತ್ತದೆ ಎಂದು ಜೋಡಿಚಿಕ್ಕೇನಹಳ್ಳಿ ಗ್ರಾಮಸ್ಥರು ಮತ್ತು ಭಕ್ತಾಧಿಗಳು ವ್ಯವಸ್ಥಾಪಕರು ತಿಳಿಸಿದ್ದಾರೆ.

 

 

Share This Article
error: Content is protected !!
";