ದಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಗಂಟಿಗಾನಹಳ್ಳಿಯಲ್ಲಿ ಐತಿಹಾಸಿಕ ಪುರಾತನ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಅತಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿ, ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಪುಷ್ಪಾನ್ಡಜ ಮಹಾಸ್ವಾಮಿಗಳು, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್ ಮುನಿಯಪ್ಪ, ಸಂಸದ ಡಾ. ಸುಧಾಕರ್ ತಂದೆ ಕೇಶವರೆಡ್ಡಿ, ಹಾಡೋನಹಳ್ಳಿ ಅಪ್ಪಯ್ಯಣ್ಣ, ಕುರುವಗೆರೆ ನರಸಿಂಹಯ್ಯ, ಮಾಜಿ ಜಿ. ಪಂ. ಸದಸ್ಯ ಅರವಿಂದ್, ನಿವೃತ್ತ ಪೊಲೀಸ್ ಅಧಿಕಾರಿ ಓಬಳೇಶ್, ಶಾಸಕ ಎ. ಸಿ. ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿನ ಮುಖ್ಯಸ್ಥರಾದ ತೆಂಗು ನಾರು ಮಂಡಳಿ ಅಧ್ಯಕ್ಷರಾದ ಗಂಟಿಗಾನಹಳ್ಳಿ ಬಾಬು ರಂಗಪ್ಪ ಹಾಗು ಟ್ರಸ್ಟಿನ ಮುಖ್ಯಸ್ಥರು ಮಾತನಾಡಿ ಸುಮಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯ ಇಂದು ಪ್ರತಿಷ್ಠಾಪನೆ ಗೊಂಡಿದೆ.
ಸುಮಾರು ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡ ದೇವಾಲಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿದೆ. ಇದಕ್ಕೆ ಹಲವಾರು ದಾನಿಗಳು ಸಹಕಾರ ನೀಡಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಇಂತಹ ಒಂದು ಮಹತ್ಕಾರ್ಯ ನಮ್ಮ ಜೀವನದ ಸಾರ್ಥಕ ಕ್ಷಣ.
ಇದಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ,ಗ್ರಾಮದ ಎಲ್ಲಾ ಜನರಿಗೂ,ಭಕ್ತಾದಿಗಳಿಗೂ ಟ್ರಸ್ಟಿನ ವತಿಯಿಂದ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಶ್ರೀ ಲಕ್ಷ್ಮಿ ರಂಗನಾಥ್ ಸ್ವಾಮಿ ಸರ್ವರಿಗೂ ಸನ್ಮಂಗಲವನ್ನು ಉಂಟುಮಾಡಲಿ ಎಂದು ಹೇಳಿದರು.