ನೂತನ ಕೃಷಿ ವಲಯ ಕಚೇರಿ ಲೋಕಾರ್ಪಣೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು
  ಕೃಷಿ ಮೇಲ್ವಿಚಾರಕರಿಗೆ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಕೃಷಿ ಸಂಬಂದಿಸಿದ ಕೆಲಸ ನಿರ್ವಹಣೆ ಮಾಡಲು  ಹಾಡೋನಹಳ್ಳಿ ಗ್ರಾಮದಲ್ಲಿ ವಲಯ ಕಚೇರಿ  ಪ್ರಾರಂಭ ಮಾಡಲಾಯಿತು. 

ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೂತನ ಕಛೇರಿಯಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಸಂಘದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆಅನುಕೂಲ ವಾಗುವ ನಿಟ್ಟಿನಲ್ಲಿ ನೂತನವಾಗಿ ಹಾಡೋನಹಳ್ಳಿ ಒಕ್ಕೂಟ ರಚನೆ ಮಾಡಿ ದಾಖಲಾತಿ ಹಸ್ತಾಂತರ ಮಾಡಿದರು. 

- Advertisement - 

ತಾಲೂಕಿನ ಯೋಜನಾಧಿಕಾರಿ ದಿನೇಶ್ ಎನ್.ಆರ್, ಒಕ್ಕೂಟದ ಪದಾಧಿಕಾರಿಗಳಾದ ಧನಂಜಯ್, ಸವಿತಾ, ಆನಂದ್, ಒಕ್ಕೂಟದ ಪದಾಧಿಕಾರಿಗಳು, ತಾಲೂಕಿನ ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ ಮೇಲ್ವಿಚಾರಕರಾದ ಈರಣ್ಣ, ಗಿರೀಶ್, ರೇಣುಕಾ ಪ್ರಸಾದ್, ಸೇವಾ ಪ್ರತಿನಿದಿಗಳು, ಪಿಎಲ್ಇ ಸೇವಾದಾರರು ಉಪಸ್ಥಿತರಿದ್ದರು.

 

- Advertisement - 

 

Share This Article
error: Content is protected !!
";