ಕೆಆರ್ ಎಸ್ ಪಕ್ಷದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಸಾವಿರಾರು ನೂತನ ಸದಸ್ಯರು ಕೆ ಆರ್ ಎಸ್ ಪಕ್ಷ ಸೇರುತ್ತಿದ್ದಾರೆ. ಇದು ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆಡೆದಿದ್ದು, ನೂತನ ಪದಾಧಿಕಾರಿಗಳ ಬರುವಿಕೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ತಿಳಿಸಿದರು.

 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-
ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕಿನ ಕೆ ಆರ್ ಎಸ್ ಕೇಂದ್ರ ಕಚೇರಿಯಲ್ಲಿ ನೆಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕಾರಣ ಎಂದರೆ ಕೇವಲ ಮೋಸ ಸುಳ್ಳು ವಂಚನೆ ಎಂಬುದೇ ಆಗಿದೆ. ಈ ದೃಷ್ಟಿಕೋನವನ್ನು ಬದಲಿಸಬೇಕೆಂಬ  ಮುಖ್ಯ ಉದ್ದೇಶದಿಂದ ನಮ್ಮ ಕೆಆರ್‌ಎಸ್ ಪಕ್ಷ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ನಮ್ಮ ಪಕ್ಷದ ಶಕ್ತಿ ಏನೆಂಬುದು ರಾಜ್ಯದ ಉದ್ದಗಲಕ್ಕೂ ತಿಳಿದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸಲಹೆ ಮೇರೆಗೆ ದೊಡ್ಡಬಳ್ಳಾಪುರ ತಾಲೂಕು ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚನೆ ಮಾಡಲಾಗಿದೆ. ತಾಲೂಕು ಸಮಿತಿಯ ಕಾಲಾವದಿ ಮೂರು ವರ್ಷ ಅಥಾವ ಜಿಲ್ಲಾ ಕಾರ್ಯಕಾರಿ ಸಮೀತಿಯ ವಿಶ್ವಾಸ ಇರುವ ತನಕ ಆಗಿರುತ್ತದೆ.ನಮ್ಮ ಕನಸು ಬ್ರಷ್ಟಾಚಾರ ರಹಿತ ಸಮಾಜ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ನೂತನ ಪದಾಧಿಕಾರಿಗಳು ಶ್ರಮಿಸಲಿ  ಎಂಬುದೇ ನನ್ನ ಆಶಯ ಎಂದರು.

  ನೂತನ ತಾಲೂಕ್ ಅಧ್ಯಕ್ಷ ಕೆ ವಿ ನಾಗರಾಜು ಮಾತನಾಡಿ ಪಕ್ಷವು ನನಗೆ ನೂತನ ಜವಾಬ್ದಾರಿ ವಹಿಸಿದ್ದು, ನನ್ನ ಹುದ್ದೆಯ ಹಾಗೂ ಪಕ್ಷಕ್ಕೆ ಮತ್ತಷ್ಟು ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ತಾಲೂಕಿನ ಪ್ರತಿ ಹಳ್ಳಿ ಹಾಗೂ ಹೋಬಳಿ ಮಟ್ಟದಲ್ಲಿ  ಪಕ್ಷದ ನೂತನ ಘಟಕಗಳನ್ನು ಬೆಳೆಸುವ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಾಗುವುದು ಎಂದರು.

 ನೂತನ  ಪದಾಧಿಕಾರಿಗಳ ಪಟ್ಟಿ ಇಂತಿದೆ :
ತಾಲ್ಲೂಕು ಅಧ್ಯಕ್ಷ- ಕೆ.ವಿ. ನಾಗರಾಜು ಕಿಲಾರನ ಹಳ್ಳಿ,ಉಪಾಧ್ಯಕ್ಷರು ಶ್ರೀನಿವಾಸ್.ಡಿ.ಎಂ,ಪ್ರ. ಕಾರ್ಯದರ್ಶಿ ಮುರಹರಿ ಡಿ.ಪಿ,ಕಾರ್ಯದರ್ಶಿ,ಮಂಜುನಾಥ್, ಪಾಪಣ್ಣ,ಜಂಟಿ ಕಾರ್ಯದರ್ಶಿ ಗೌತಮ್ ಗಂಗಪ್ಪ, ಸಂಘಟನಾ ಕಾರ್ಯದರ್ಶಿಬಾಲಕೃಷ್ಣ, ನೂತನವಾಗಿ ಆಯ್ಕೆಯಾಗಿ ಪದಗ್ರಹಣ ಸ್ವೀಕರಿಸಿದರು.

 ತಾಲೂಕು ಸಮಿತಿಯು ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ತಾಲೂಕಿನಾದ್ಯಂತ ಪಕ್ಷವನ್ನು ಸಧೃಡವಾಗಿ ಸಂಘಟಿಸಿ ಜನಪರ ಹೋರಾಟಗಳನ್ನು ಕೈಗೊಳ್ಳಬೇಕೆಂದು ಗಣ್ಯರು ಹಾರೈಸಿದರು.

  ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ್ರೀನಿವಾಸ್ , ಮಹಿಳಾ ಘಟಕದ ಅಧ್ಯಕ್ಷ ರಂಜಿತ, ಮಹಿಳಾ ಮುಖಂಡರಾದ ಲಲಿತ, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್   ಪಕ್ಷದ  ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";