ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಂಗಾಳ ಕೊಲ್ಲಿಯಲ್ಲಿ ಮತ್ತೂಮ್ಮೆ ವಾಯುಭಾರ ಕುಸಿತದಿಂದ ಹವಾಮಾನ ಇಲಾಖೆ ಮಾಹಿತಿಯಂತೆ ಡಿ 13 ರಿಂದ ಮತ್ತೂಮ್ಮೆ ಮಳೆ ಬರುವ ಸಾದ್ಯತೆ ಇದೆ ರೈತರು ರಾಗಿ ಕಟಾವು ಮಾಡಲು ಸಿದ್ದತೆ ಇರುವ ಸಂದರ್ಭದಲ್ಲಿ ರೈತರ ಅಸಹಾಯಕ ಸ್ಥಿತಿಯನ್ನೆ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ದಿಢೀರನೆ ರಾಗಿ ಕಟಾವು ಮಾಡುವ ಯಂತ್ರಗಳ ಬೆಲೆಯನ್ನು ಹಿಂಬಾಗಿಲ ಮೂಲಕ ಹೆಚ್ಚು ಮಾಡಿದ್ದಾರೆ.
ಮತ್ತೂಮ್ಮೆ ಚಂಡಮಾರುತದಿಂದ ರಾಜ್ಯದಲ್ಲಿ ಮಳೆಯಾಗುವ ಲಕ್ಷಣಗಳು ಹೆಚ್ಚಾಗಿದ್ದು ರೈತರು ರಾಗಿ ಕೊಯ್ಲು ಮಾಡಲು ಮುಂದಾಗಿದ್ದಾರೆ ಇದೆ ಸಮಯವನ್ನ ದುರುಪಯೋಗ ಪಡಿಸಿಕೊಂಡು ರಾಗಿ ಕಟಾವು ಮಾಡುವ ಯಂತ್ರಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಮಧ್ಯವರ್ತಿಗಳು ರಾಗಿ ಕಟಾವು ಮಾಡುವ ಯಂತ್ರದ ಬಾಡಿಗೆ ನಿಗದಿತ ಬೆಲೆಗಿಂತ ಹೆಚ್ಚಾಗಿ ಪಡೆಯುತ್ತಿದು ಜಿಲ್ಲಾಧಿಕಾರಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ.
ಮಧ್ಯವರ್ತಿಗಳು ರಾಗಿ ಕಟಾವು ಮಾಡುವ ಯಂತ್ರಗಳನ್ನು ಬೇರೆ ಕಡೆಯಿಂದ ಬರಮಾಡಿಕೊಂಡು ತಮ್ಮ ಮನೆ ಹೊಲಗಳಲ್ಲಿ ಸ್ಥಳ ನೀಡಿ ರೈತರ ಸಂಪರ್ಕಕ್ಕೆ ಮದ್ಯವರ್ತಿಗಳೆ ಹೋಗಿ ಬೆಲೆ ನಿಗದಿ ಪಡಿಸಿ ಹಣ ಪಡೆದ ನಂತರ ಯಂತ್ರಗಳನ್ನು ಕಟಾವು ಮಾಡಲು ಮುಂದಾಗುವ ವ್ಯವಸ್ಥೆ ಯಿಂದ ರೈತರಿಗೂ ಅನ್ಯಾಯ ಹಾಗು ರಾಗಿ ಕಟಾವು ಯಂತ್ರದ ಮಾಲೀಕರಿಗೂ ಮೋಸ ಮಾಡಿ ಹಣ ಮಾಡುವ ಮಧ್ಯವರ್ತಿಗಳು ರಾಗಿ ಕಟಾವು ಯಂತ್ರಗಳ ಮಾಲೀಕರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದಾರೆ.
ರೈತರಿಂದ ಹೆಚ್ಚು ಬಾಡಿಗೆ ಪಡೆದರೆ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ದ ವಿಪತ್ತು ನಿರ್ವಾಣೆ ಕಾಯ್ದೆ 2005 ದರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಜಿಲ್ಲಾಧಿಕಾರಿಗಳ ಎಚ್ಚರಿಕೆಯಲ್ಲಿಯೂ ಮಾಲಿಕರು ದಲ್ಲಾಳಿಗಳ ಮೂಲಕ ಹೆಚ್ಚು ಬಾಡಿಗೆ ಪಡೆಯುತ್ತಿದ್ದಾರೆ ಎಂದು ಸಾಸಲು ಹೋಬಳಿಯ ರಾಜ ಕುಮಾರ ಆರೋಪಿಸಿದ್ದಾರೆ. ಚಿಕ್ಕ ರಾಗಿ ಕಟಾವು ಯಂತ್ರಕ್ಕೆ 2700 ರೂ ಹಾಗು ದೊಡ್ಡ ಯಂತ್ರಕ್ಕೆ 3350 ರೂ ನಿಗದಿಯಾಗಿದ್ದು ಅದರೆ ರೈತರಿಂದ ಚಿಕ್ಕ ಯಂತ್ರಕ್ಕೆ 3300 ಹಾಗು ದೊಡ್ಡ ಯಂತ್ರಕ್ಕೆ 4000 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು ಅವರು ಹೇಳಿದಷ್ಟು ಬೆಲೆ ನೀಡಿ ರಾಗಿ ಕೊಯ್ಲು ಮಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಪ್ರಸ್ತುತ ಅಡ್ಡದಾರಿಯ ಮೂಲಕ ಬಾಡಿಗೆ ವಸೂಲಿ ಮಾಡುವ ಮಾರ್ಗವಾಗಿದೆ ಹೆಚ್ಚು ಪ್ರಶ್ನೆ ಮಾಡಿದರೆ ಬೇರೆ ರೈತರು ವಾರಕ್ಕೆ ಮುಂಚಿತವಾಗಿ ನಮ್ಮ ರಾಗಿ ಕಟಾವು ಮಾಡುವ ಯಂತ್ರಗಳನ್ನು ಮುಂಗಡ ಹಣ ನೀಡಿ ಬುಕ್ ಮಾಡಿರುವ ಜಮೀನಿಗೆ ಹೋಗ ಬೇಕಾಗಿದೆ ಎಂದು ನೆಪ ಹೇಳುತ್ತಿದ್ದಾರೆ.
ಕೃಷಿಗೆ ಸಂಬಂದ ಪಟ್ಟ ಅಧಿಕಾರಿಗಳು ಮದ್ಯ ಪ್ರವೇಶ ಮಾಡಿ ಈ ಸಮಸ್ಯೆಯನ್ನು ಈಡೇರಿಸ ಬಹುದಾಗಿದೆ ಅದರೆ ಅಧಿಕಾರಿಗಳು ರೈತರ ಜಮೀನುಗಳಿಗೆ ಹೋಗದೆ ಸಮಯಕ್ಕೆ ಸರಿಯಾಗಿ ಕಛೇರಿ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ಕಛೇರಿಯಲ್ಲಿ ಕುಳಿತುಕೊಳ್ಳುವ ಬದಲು ರಾಗಿ ಕೊಯ್ಲು ಮುಗಿಯುವ ವರೆವಿಗೂ ಗ್ರಾಮಗಳಿಗೆ ಬೇಟಿ ನೀಡಿ ರೈತ ಕಷ್ಟಗಳಿಗೆ ಸ್ಪಂದಿಸಿ ರಾಗಿ ಕಟಾವು ಮಾಡು ಯಂತ್ರಗಳನ್ನು ಮಧ್ಯವರ್ತಿಗಳಿಂದ ನೇರವಾಗಿ ಮಾಲಿಕರಿಂದ ರೈತರಿಗೆ ಸರ್ಕಾರ ನಿಗದಿ ಪಡಿಸಿರುವ ಬೆಲೆ ಕೊಡಿಸಿದರು ರೈತ ಸಮಸ್ಯೆ ಬಗೆಹರಿಯುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
“ಪ್ರಸ್ತುತ ವರ್ಷದಿಂದ ಹಿಂದಿ ವರ್ಷಕ್ಕೆ ಹೋಲಿಸಿದರೆ ಇಂಧನ ದರ ಯಥಾಸ್ಥಿತಿ ಇದೆ ನಿರ್ವಹಣಾ ವೆಚ್ಚವು ಪರಿಗಣಿಸಿದರೆ ರಾಗಿ ಕಟಾವು ಯಂತ್ರಕ್ಕೆ ಪ್ರತಿ ಘಂಟೆಗೆ ಜಾನ್ಡೀರ್ ಕಂಪನಿ ಹಾಗು ನ್ಯೂ ಹಾಲೆಂಡ್ ಕಳೆದ ವರ್ಷ ದೊಡ್ಡ ಯಂತ್ರಕ್ಕೆ 3350 ಹಾಗು ಚಿಕ್ಕ ಯಂತ್ರಕ್ಕೆ 2800 ರೂ ಗಳು ನಿಗದಿಯಾಗಿತ್ತು ಆದರೆ ಮಧ್ಯವರ್ತಿಗಳ ಹಾವಳಿಯಿಂದ ರೈತರಿಂದ ಹೆಚ್ಚು ಹಣ ಪಡೆಯುತ್ತಿದ್ದಾರೆ”.
ಅಂಜನ್ ಕುಮಾರ್, ರೈತ, ನೆಲ್ಲುಕುಂಟೆ ಹೊಸಹಳ್ಳಿ.